ಉದ್ಭವ ಬಸವೇಶ್ವರರ ಮಹಾರಥೋತ್ಸವ
ಚನ್ನಮ್ಮನ ಕಿತ್ತೂರ,ಮಾ12: ತಾಲೂಕಿನ ನಂದಿಹಳ್ಳಿ ಉದ್ಭವ ಬಸವೇಶ್ವರರ ಮಹಾರಥೋತ್ಸವ ಅದ್ದೂರಿಯಿಂದ ಜರುಗಿತು.
ಕ್ಷೇತ್ರದಲ್ಲಿ ಶಿವರಾತ್ರಿ ಅಮವಾಸ್ಯೆ ದಿನ ಬೆಳಿಗ್ಗೆಯಿಂದ ಅಭಿಷೇಕದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಭಕ್ತರು ಸಾಲಾಗಿ ತೆರಳಿ ದೇವರ ದರ್ಶನ ಪಡೆದರು. ಸುಕ್ಷೇತ್ರದೆಲ್ಲೆಡೆ ಹರಹರ ಮಹಾದೇವ ಎಂದು ಕೂಗಿದರು.
ಎತ್ತಿನ ಮೆರವಣಿಗೆ, ದಿಡನಮಸ್ಕಾರ ನಡೆದವು.
ಗ್ರಾಮಸ್ಥರು 4ನೇ ಶತಮಾನದಿಂದ ನಡೆದುಕೊಂಡು ಬಂದ ಪದ್ಧತಿ ನಂದಿಕೋಲು,ಹಳಬಂಡಿ, ಸಮಾಳ,ಡೋಲು, ಹಲಗೆಹಳೆಬಂಡಿ, ಕರಡಿಮಜಲು, ಬೆಂಡಬಾಜ ಅಂಲಕರಿಸಿದ ಎತ್ತು ಚಕ್ಕಡಿಗಳು, ಭಜನೆ ಮೆರವಣಿಗೆ ನಡೆಸಿದರು. ನೂರಾರು ವರ್ಷಗಳಿಂದ ನಡೆದು ಬಂದ ನಂದಿಕೋಲ ಕುಣಿತ ಹಲಗೆ ಶಬ್ದ, ಮಂಗಳವಾದ್ಯಗಳಿಗೆ ಹೆಜ್ಜೆ ಹಾಕುತ್ತಾ ಕುಣಿಯುವುದು ನೋಡುಗರ ಕಣ್ಮಣ ಸೆಳೆದಿತ್ತು. ತಾಲೂಕ ಸೇರಿದಂತೆ ವಿವಿಧ ಜಿಲ್ಲೆ ವಿವಿಧ ತಾಲೂಕು, ಹೊರರಾಜ್ಯಗಳಿಂದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದರು.
ಪೋಲಿಸ್, ವಿದ್ಯುತ್ತ್, ಧಾರ್ಮಿಕದತ್ತಿ ಇಲಾಖೆಯ ಸಹಾಯಕ ಆಯುಕ್ತರು, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು, ರಥೋತ್ಸವ ಕಮೀಟಿ ಯುವಕರು, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ,ಸದಸ್ಯರು, ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ರಥೋತ್ಸವದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.