ಬೀಳ್ಕೊಡುವ ಸಮಾರಂಭ
ಬಾದಾಮಿ,ಮಾ12: ತಾಲೂಕಿನ ಕಾತರಕಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಪ್ರಸಕ್ತ ಸಾಲಿನ 7ನೇ ವರ್ಗದ ಮಕ್ಕಳ ಶುಭಕೋರುವ ಸಮಾರಂಭ ಹಾಗೂ ಶಾಲೆಗೆ ದೇಣಿಗೆ ನೀಡಿದ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭ ಜರುಗಿತು.
ಶೈಕ್ಷಣಿಕ ವರ್ಷದ ಅವಧಿಯಲ್ಲಿ, ಉತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಗ್ರಾಮದ ರಂಗನಗೌಡ ದೊಡ್ಡಗೌಡರ, ಮಾಜಿ ತಾ.ಪಂ.ಅಧ್ಯಕ್ಷ ಹನುಮಂತ ದೇವರಮನಿ, ಶಿಕ್ಷಣ ಪ್ರೇಮಿ ಪರ್ವತ ಗೌಡ ಪಾಟೀಲ, ಮೌನೇಶ್ ಬಡಿಗೇರ, ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್. ಎಸ್. ಬೂದನ್ನವರ, ಹಿರಿಯ ಶಿಕ್ಷಕರಾದ ಎಸ್. ಆರ್. ಕಾತರಕಿ, ಎಚ್. ಎಸ್ ನರಸಾಪುರ, ಐ.ಎ. ಸೋಲಾಪುರ, ಎಸ್ .ಎಸ್. ಲೋಣಿ , ನಾಗರಾಜ ಹೊಸೂರ, ಕ್ರುನಾಲ್ ಮಣ್ಣೂರ್, ಸಹಶಿಕ್ಷಕಿಯರಾದ ಎಲ್. ಎಸ್ .ಗುಮಾಸ್ತೇ, ಭಾರತಿ ಮಾನ್ವಿ, ಶಂಕ್ರಮ್ಮ ಮಂಗಳೂರು, ಗಿರಿಜಾ ದಳವಾಯಿ, ಸುವರ್ಣ ಹೂಗಾರ, ಪದ್ಮಾವತಿ ಕೋಳಿವಾಡ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿದ್ಯಾ ಹೊರಕೇರಿ ನಿರೂಪಿಸಿದಳು. ಕುಮಾರಿ ಸುಧಾ ಗೌಡರ ಹಾಗೂ ಹರ್ಷಿತ ಹೊಸೂರ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ಪೂರ್ಣಿಮಾ ಶಿವಪುರ ಸ್ವಾಗತಿಸಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮಿ ಮಲ್ಲಾಪುರ ವಂದಿಸಿದರು.