ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಹುಬ್ಬಳ್ಳಿ,ಮಾ12: ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 62ರಲ್ಲಿ ಬರುವ ಮಂಟೂರು ರಸ್ತೆ, ಭಾರತ ಕಾಲೋನಿ-1 ಭಾರತ ಕಾಲೋನಿ-2 ಮತ್ತು ಕೆ.ಬಿ. ನಗರದಲ್ಲಿ ಸಿಸಿ ರಸ್ತೆ, ಒಳಚರಂಡಿ, ತೆರದ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪೂರ್ವ ಕ್ಷೇತ್ರದ ಶಾಸಕರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಂಟೂರು ರಸ್ತೆಯು ಪೂರ್ವ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ನಾನು ಶಾಸಕನಾಗುವ ಮೊದಲು ಈ ಭಾಗದಲ್ಲಿ ಸುಸಜ್ಜಿತ ರಸ್ತೆಗಳೇ ಇರಲಿಲ್ಲ. ಜನರು ಓಡಾಡದ ಪರಿಸ್ಥಿತಿ ಇತ್ತು. ಕಳೆದ 10ವರ್ಷದಲ್ಲಿ ಮಂಟೂರು ಭಾಗಕ್ಕೆ ಅಂದಾಜು 110ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಮಾಡಲಾಗಿದೆ ಎಂದರು.
ಹಳೆ ಮಂಟೂರು ರಸ್ತೆ, ಹೊಸ ಮಂಟೂರು ರಸ್ತೆ, ಸುಣ್ಣದ ಭಟ್ಟಿ, ಕೃಪಾ ನಗರ ಹೀಗೆ ಈ ಭಾಗದ ಬಹುತೇಕ ಬಡಾವಣೆಗಳಲ್ಲಿ ಸಾರ್ವಜನಿಕ ಅಗತ್ಯ ಸೌಲಭ್ಯ ಒದಗಿಸಿ ಜನರು ನನ್ನಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭಾಷೆಯಂತೆ ಇಂದು ಈ ಭಾಗವಷ್ಟೇ ಅಲ್ಲ ಇಡೀ ಕ್ಷೆತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.