ದೇಶದ ಅಭಿವೃದ್ಧಿಯಲ್ಲಿ ನಾರಿಯರ ಕೊಡುಗೆ ಸ್ಪೂರ್ತಿದಾಯಕ : ಭೂಮೆ
ಸಂಜೆವಾಣಿ ವಾರ್ತೆ
ಔರಾದ :ಮಾ.12: ಮಹಿಳೆಯರು ಸಮಾಜದಲ್ಲಿ ಅನಾದಿಕಾಲದಿಂದಲು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಜಗತ್ತಿಗೆ ಅವರ ಸಾಧನೆ ಅಮೋಘವಾಗಿದೆ. ದೇಶದ ಅಭಿವೃಧ್ಧಿಯಲ್ಲಿ ನಾರಿಯರ ಕೊಡುಗೆ ಸ್ಪೂರ್ತೀದಾಯಕವಾಗಿದೆ ಎಂದು ಮಹಾರಾಷ್ಟ್ರ ರಾಜ್ಯದ ದೆಗಲೂರಿನ ಖ್ಯಾತ ಸ್ತ್ರೀ ರೋಗ ತಜ್ಞೆ ಡಾ.ಶೋಭಾತಾಯಿ ಜರ್ನಾದನ ಭೂಮೆ ಅಭಿಪ್ರಾಯಪಟ್ಟರು.
ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂತಪುರ ಮತ್ತು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೇಡರೇಷನ್ ಔರಾದ್ ತಾಲೂಕು ಶಾಖೆ ಸಹಯೋಗದಲ್ಲಿ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆಗೆ ಜ್ಯೋತಿ ಪ್ರಜ್ವಲಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪಾರ ಸಾಧನೆಯಲ್ಲಿ ಮುಂದೆ ಬಂದಿರುವ ಮಹಿಳೆಯರಿಗೆ ಸಮಾಜದಿಂದ ಇನ್ನಷ್ಟು ಪ್ರೇರಣೆ ಸಹಕಾರ, ಸ್ಪೂರ್ತಿ ದೊರೆತರೇ ಇನ್ನು ಉತ್ತುಂಗಕ್ಕೆ ಎರಿ ಅಪಾರ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವರು. ಮಹಿಳೆಯರ ಮೇಲೆ ಜರುಗುತ್ತಿರುವ ಅನ್ಯಾಯ, ಶೋಷಣೆ, ದೌರ್ಜನ್ಯ ಅಪರಾಧಗಳು ಕಡಿಮೆಯಾಗಬೇಕೆಂದರೇ ಮಹಿಳೆಯರು ಮೋದಲು ಸುಶಿಕ್ಷಿತರಾಗಿ ಸಮಾಜದಲ್ಲಿನ ಉತ್ತಮ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಸಿಡಿಪಿಒ ಇಮಾಲಪ್ಪ ಡಿಕೆ ಮಾತನಾಡಿ, ಗಂಡು ಹೆಣ್ಣು ಇಬ್ಬರು ಸಮಾನರು ಎಂದು ಭಾವಿಸುವ ಮನೋಭಾವನೆ ಎಲ್ಲರಲ್ಲಿ ಬರಬೇಕು. ಬೇಟಿ ಬಚಾವೋ ಬೇಟಿ ಪಡಾವೋ ಅನ್ನುವ ಘೋಷವಾಕ್ಯ ಕೇವಲ ಪುಸ್ತಕದಲ್ಲಾಗದೇ ಅದು ಪ್ರತಿಯೊಬ್ಬರು ಅವರವರ ಕುಟುಂಬದಲ್ಲಿ ಅಳವಡಿಸಿಕೊಂಡು, ಹೆಣ್ಣಿಗೆ ಸಮಾನವಾದ ಅವಕಾಶಗಳನ್ನು ನೀಡಬೇಕು. ಸಮಾಜದಲ್ಲಿ ಅವರಿಗೆ ಯಾವುದೇ ತಾರತಮ್ಯ ಮಾಡದೇ ಅವರ ಭವಿಷ್ಯ ಸುಭಧ್ರಗೊಳಿಸುವಲ್ಲಿ ಎಲ್ಲರು ಕೈಜೋಡಿಸಬೇಕು . ಸಮಾಜದಲ್ಲಿ ಮಹಿಳೆಯರಿಗೆ ಗೌರವ , ಪ್ರೇರಣೆ ನೀಡುವುದು ಅತ್ಯಗತ್ಯವಾಗಿದೆ ಎಂದರು.
ಬೀದರ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತೆ ಸಂಗೀತಾ, ಮಕ್ಕಳ ಸಹಾಯವಾಣಿ ತಾಲೂಕು ಸಂಯೋಜಕ ಸುನೀಲಕುಮಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೃತ್ತಿಯಲ್ಲಿ ದಂತವೈಧ್ಯಳಾಗಿ ರಂಗೋಲಿಯಲ್ಲಿ ವಿಶೇಷ ಧಾರ್ಮಿಕ ಭಾವಚಿತ್ರಗಳನ್ನು ಬಿಡಿಸಿ ಹೆಸರು ಮಾಡುತ್ತಿರುವ ಪಟ್ಟಣದ ಪ್ರತಿಭೆ ಡಾ. ಐಶ್ವರ್ಯ ಸುಂದಾಳೆ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಔರಾದ್, ಕಮಲನಗರ ತಾಲುಕಿನ ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸಿಡಿಪಿಒ ಇಮಾಲಪ್ಪ ಡಿಕೆ, ಚಂದ್ರಶೇಖರ ಪಾಟೀಲ್, ಸಂತೋಷ ಚಾಂಡೇಶ್ವರೇ, ಅಬ್ದುಲ ಖಲಿಲ್, ಎನ್.ವಿ .ಬಿರಾದರ್, ಪೆÇ್ರೀ. ಓಂ ಪ್ರಕಾಶ ದಡ್ಡೆ, ರಾಜೇಶ್ರೀ, ವಿಜಯಲಕ್ಷ್ಮಿ , ಶೋಭಾ ನಾಗೂರು, ಸತೀಷ, ಸಚ್ಚದಾನಂದ ಇತರರಿದ್ದರು. ವಲಯ ಮೇಲ್ವಿಚಾರಕಿ ಶೋಭಾ ರಾಠೋಡ್ ಸ್ವಾಗತಿಸಿದರು. ಯೋಗೇಶ್ವರಿ ನೀರೂಪಿಸಿದರು.