ಮುನೇಶ್ವರಸ್ವಾಮಿ ದೇವಾಲಯದ ಪ್ರಥಮ ವಾರ್ಷಿಕೋತ್ಸವ
ವಿಜಯಪುರ.ಮಾ೧೨:ಪಟ್ಟಣ ಸಮೀಪದ ಕೋಲಾರ ಮುಖ್ಯರಸ್ತೆಯ ಬಳಿವಿರುವ ಹಾರ್ಡಿಪುರದ ಶ್ರೀನಿವಾಸಪ್ಪ ತೋಟದ ಬಳಿವಿರುವ ಶ್ರೀ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಒಂದನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರದ್ದಭಕ್ತಿಯಿಂದ ನಡೆಯಿತು.
ದೇವಾಲಯವನ್ನು ವಿವಿಧ ಪುಷ್ವಗಳಿಂದ ಅಲಂಕಾರಿಸಲಾಯಿತು. ದೇವಾಲಯದ ಹೊರ ಭಾಗದಲ್ಲಿರುವ ೯ ಅಕ್ಕಯಮ್ಮನವರ ಮೂರ್ತಿಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿಲಾಯಿತು. ರಾತ್ರಿ ಅರ್ಚಕರಿಂದ ಗಣಹೋಮ, ನವಗ್ರಹ, ರುದ್ರಾಭಿಷೇಕ, ಬಿಂಬಶುದ್ಧಿ, ಪಂಚಾಮೃತ ಅಭಿಷೇಕ, ಸಾನ್ನಿಧ್ಯ ಕಲಶಾಭಿಷೇಕ, ತ್ರಯಂಬಕ ಪೂಜೆ, ಮಹಾಪೂಜೆ, ದೇವರ ನೃತ್ಯ ಉತ್ಸವ ನಡೆಯಿತು.
ಮಹಾಪೂಜೆ ಮತ್ತು ಮಹಾಮಂಗಳಾರತಿಯ ಅನಂತರ ಪ್ರಸಾದ ವಿನಿಯೋಗವಾಯಿತು. ವಿವಿಧ ಧಾರ್ಮಿಕ ಕೈಂಕರ್ಯಗಳಿಗೆ ನೂರಾರು ಭಕ್ತರು ಸಾಕ್ಷಿಯಾದರು.
ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಶ್ರೀನಿವಾಸಪ್ಪ ಅಧುನಿಕತೆ ಹೆಚ್ಚಾದಂತೆ ಮನುಷ್ಯ ಒತ್ತಡದಲ್ಲಿ ಜೀವನ ಸಾಗಿಸುವಂತಾಗಿದೆ. ಮಾನಸಿಕ ಒತ್ತಡ ಮತ್ತು ಬದುಕಿನ ಜಂಜಾಟದಿಂದ ದೂರವಾಗಲು ಮನುಷ್ಯ ದೇವಾಲಯಗಳಿಗೆ ಬರುತ್ತಿದ್ದು, ಇಲ್ಲಿ ಅವರಿಗೆ ನೆಮ್ಮದಿ ಮೂಡಿಸುವ ಕೆಲಸ ಮಾಡ ಬೇಕಾಗಿದೆ. ಇಂದು ಧಾರ್ಮಿಕ ಸ್ಥಳಗಳು ಮಾತ್ರ ಶಾಂತಿ ಮತ್ತು ನೆಮ್ಮದಿ ದೊರೆಯುವ ತಾಣಗಳಾಗಿವೆ. ಇಂತಹ ಸ್ಥಳಗಳಲ್ಲಿ ಮನುಷ್ಯ ತನ್ನ ಒತ್ತಡವನ್ನು ಮರೆತು ಸ್ವಲ್ಪ ಸಮಯ ನೆಮ್ಮದಿಯಿಂದ ಇರಲು ಸಾಧ್ಯವೆಂದರು.
ದೇವಾಲಯದ ಮುಖಂಡ ಜಯರಾಮ್ ಮಾತನಾಡಿ, ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಅತ್ಯಂತ ದೂರದೃಷ್ಟಿ ಇರಿಸಿ ಕೊಂಡು ದೇವಾಲಯಗಳ ಪರಂಪರೆ ಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಹುಟ್ಟು ಹಾಕಿದ್ದಾರೆ. ಇಂತಹ ದೇವಾಲಯಗಳಿಂದ ಮನುಷ್ಯನ ಬದುಕಿನಲ್ಲಿ ಬದ ಲಾವಣೆಗಳನ್ನು ಮೂಡಿಸುವ ಕೆಲಸವಾಗ ಬೇಕು ಎಂದರು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಆನಂದ್, ಸೀನಪ್ಪ, ಮುನಿರಾಜ್, ಸುದೀರ್, ಮುನಿಯಪ್ಪ, ಹರ್ಷ,ಹಾಗೂ ಭಕ್ತವೃಂದ ಹಾಜರಿದ್ದರು.