ಲಿಟಲ್ ಏಂಜಲ್ಸ್ ಮಾಂಟೆಸ್ಸರಿಯಲ್ಲಿ ವಾರ್ಷಿಕೋತ್ಸವ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.12:- ಬನ್ನಿಮಂಟಪದಲ್ಲಿರುವ ಲಿಟಲ್ ಏಂಜಲ್ಸ್ ಮಾಂಟೆಸ್ಸರಿಯಲ್ಲಿ ವಾರ್ಷಿಕೋತ್ಸವ ಆಚರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಮಧುರಾ ಫಾಟಕ್ ಮಾತನಾಡಿ, ಇಲ್ಲಿನ ಮಕ್ಕಳು ಎಲ್ಲ ಭೇದ ಭಾವ ಮರೆತು ಕಲಿಯುತ್ತಿರುವುದು ಹಾಗೂ ಈ ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವುದು ಶಾಲಾ ಆಡಳಿತ ಮಂಡಳಿಗೆ ಮಾತ್ರವಲ್ಲ, ಪೆÇೀಷಕರಿಗೂ ಹರ್ಷ ತಂದಿದೆ. ಕಲಿಕೆ ಮತ್ತು ಬೆಳವಣಿಗೆಯ ವಾತಾವರಣವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು. ಬಳಿಕ, ಶಾಲಾ ಮುಖ್ಯೋಪಾಧ್ಯಾಯರಾದ ಡಾ.ಸುಲ್ತಾನಾ ಜಬೀನ್, ಕೇಂದ್ರದ ಮುಖ್ಯಸ್ಥರಾದ ಅಸ್ಮಾ ತಾಹುರಾ, ಮಾರ್ಗದರ್ಶಕರಾದ ಡೀಡ್ರೆ ಜಾಯ್ ಬೂಥರ್ ಮಕ್ಕಳಿಗೆ ಹಿತ ವಚನ, ಪೆÇೀಷಕರಿಗೆ ಮಾರ್ಗದರ್ಶನದ ನುಡಿಗಳನ್ನಾಡಿದರು.
ಮಕ್ಕಳು ವಾರ್ಷಿಕೋತ್ಸವ ಸಮಾರಂಭದಲ್ಲಿ ತಮ್ಮ ತಮ್ಮ ಪ್ರತಿಭೆಗಳನ್ನು ಅತ್ಯುತ್ಸಾಹದಿಂದ ಪ್ರದರ್ಶಿಸಿದುದು ಎಲ್ಲರ ಗಮನ ಸೆಳೆಯಿತು.
ಶಾಲೆಯ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಮತ್ತು ಪೆÇೀಷಕರು ಹಾಜರಿದ್ದರು.