ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿಗೆ ಎಬಿವಿಪಿ ಆಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.12:ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕ ರೂಪ ಶೈಕ್ಷಣಿಕ ವೇಳಾಪಟ್ಟಿ ಜಾರಿಗೆ ತರುವಂತೆ ಅಗ್ರಹಿಸಿ ಎಬಿವಿಪಿ ನಿಯೋಗ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವÀ ಡಾ. ಎಂ.ಸಿ. ಸುಧಾಕರ್ ಅವರನ್ನು ಭೇಟಿ ಮಾಡಿ ವಿಜಯಪುರದ ಮಹಿಳಾ ವಿವಿಯಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಇದರ ಶೈಕ್ಷಣಿಕ ದುಂಡು ಮೇಜಿನ ಸಭೆಯು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯಿತು. ಈ ಸಭೆಯಲಿ ್ಲರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪ್ರವೇಶಾತಿ- ಪರೀಕ್ಷೆ-ಫಲಿತಾಂಶಗಳ ಕುರಿತು ಸುದೀರ್ಘವಾದ ಚರ್ಚೆ ನಡೆಯಿತು. ಮಾದರಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಪ್ರವೇಶಾತಿ ಅಧಿಸೂಚನೆ. ಮೇ ತಿಂಗಳು, ಅಂತಿಮ ಪ್ರವೇಶಾತಿ ಪ್ರಕ್ರಿಯೆ ಜುಲೈ 31, 1,3, ಮತ್ತು 5 ನೆ ಸೆಮಿಸ್ಟರ್‍ತರಗತಿ ಪ್ರಾರಂಭ ಆಗಸ್ಟ್ 01 ರಿಂದ, ಬೆಸ ಸೆಮಿಸ್ಟರ್ ಪರೀಕ್ಷೆಗಳು ಡಿಸೆಂಬರ್‍ರಿಂz Àಜನವರಿ 15 ರವರೆಗೆ, 2,4 ಮತ್ತು 6 ನೆ ಸೆಮಿಸ್ಟರ್ ತರಗತಿ ಪ್ರಾರಂಭ ಜನವರಿ 15 ರಿಂದ, 6 ಸಮ ಸೆಮಿಸ್ಟರ್ ಪರೀಕ್ಷೆಗಳು ಮೇ 15 ರಿಂದ ಜೂನ್ 30 ರ ವರೆಗೆ ದುಂಡು ಮೇಜಿನ ಸಭೆಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಕುಲಪತಿಗಳು ಮಾಜಿ ಉಪಕುಲಪತಿಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು. ಸಭೆಯಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ವೇಳಾಪಟ್ಟಿಯನ್ನು ಪಾಲಿಸುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಯು.ಯು.ಸಿ.ಎಮ್. ಎಸ್. ತಂತ್ರಾಂಶದಲ್ಲಿ ಇರುವ ಯಾವುದೇ ನ್ಯೂನ್ಯತೆಗಳನ್ನು ಸರಿಪಡಿಸಿ ಅದನ್ನು ಬಳಸಲು ಕೌಶಲ್ಯ ಭರಿತ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಅಭಿಪ್ರಾಯ ಪಡಲಾಯಿತು, ತನ್ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ತೊಂದರೆ ಉಂಟಾಗಬಾರದು ಹಾಗೂ ಅವರು ಸೂಕ್ತ ಸಂದರ್ಭದಲ್ಲಿ ಫಲಿತಾಂಶವನ್ನು ಪಡೆದು ಅವರಿಗೆ ಉನ್ನತ ಶಿಕ್ಷಣಕ್ಕೆ ಅಥವಾ ಉದ್ಯೋಗಕ್ಕೆ ತೆರಳಲು ಅನುಕೂಲಕರ ವಾತಾವರಣವನ್ನು ರಾಜ್ಯದ ವಿವಿಗಳು ಸರಕಾರ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಲಾಯಿತು.
ಎಬಿವಿಪಿಯ ವಿಭಾಗ ಸಹ ಪ್ರಮುಖ ಡಾ. ಅಮೀತಕುಮಾರ ಬಿರಾದಾರ ಮಾತನಾಡಿ, ದುಂಡು ಮೇಜಿನ ಸಭೆಯಲ್ಲಿ ಮೂರು ಹಂತದಲ್ಲಿ ಚರ್ಚಿಸಲಾಯಿತು. ಪ್ರವೇಶಾತಿ ಎಂಬ ಶೀರ್ಷಿಕೆ ಅಡಿಯಲ್ಲಿ ಕೋರೋಣ ನಂತರದ ಕಾಲಘಟ್ಟದಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ವ್ಯತ್ಯಾಸ ಉಂಟಾಗಿ ಫಲಿತಾಂಶದಲ್ಲಿ ಏರುಪೇರು ಉಂಟಾಯಿತು. ಪಿಯುಸಿ ಇಂದ ಹೊರಬಂದ ವಿದ್ಯಾರ್ಥಿಗಳು ನಾಲ್ಕೈದು ತಿಂಗಳು ಕಾಯುವಂತಾಗಿ ಕಾಲೇಜು ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ವಿವಿಧ ಕೋರ್ಸುಗಳಿಗೆ ಸೇರುವಲ್ಲಿ ಅಡಚಣೆ ಉಂಟಾಗಿ, ಹೆಚ್ಚಿನವರು ಖಾಸಗಿ ವಿಶ್ವವಿದ್ಯಾಲಯಗಳಿಗೆ ದುಬಾರಿ ಹಣ ತೆತ್ತು ಪ್ರವೇಶ ಪಡೆಯುವಂತಾಗಿದೆ. ಇದರಿಂದ ಉಳಿದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಪ್ರವೇಶಾತಿಯಲ್ಲಿ ಗಣನೀಯ ಕೊರತೆ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸಮಾನಾಂತರ ವೇಳಾಪಟ್ಟಿಯನ್ನು ಅಳವಡಿಸಿ, ಮೇ ತಿಂಗಳಲ್ಲಿ ಪ್ರವೇಶಾತಿ ಅಧಿಸೂಚನೆಯನ್ನು ಹೊರಡಿಸಿ ಅಗಸ್ಟ್ ತಿಂಗಳಲ್ಲಿ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭವಾಗಬೇಕು, ಆನಂತರz Àಒಂದು ತಿಂಗಳಲ್ಲಿ ಅರ್ಥಾತ್ ಸೆಪ್ಟೆಂಬರ್ ತಿಂಗಳಲ್ಲಿ ಸ್ನಾತಕೋತ್ತರ ತರಗತಿಗಳು ಆರಂಭವಾಗಬೇಕೆಂದು ಮನವಿ ಮಾಡಿಕೊಂಡರು.
ಪರೀಕ್ಷೆಗಳನ್ನು ಸರಿಯಾಗಿ ಯೋಜನೆ ಮಾಡಿ ಅದನ್ನು ಶೈಕ್ಷಣಿಕ ವೇಳಾಪಟ್ಟಿಯಲ್ಲಿ ದಿನಾಂಕಗಳನ್ನು ನಿಗದಿಗೊಳಿಸಬೇಕು. ಆಯಾ ವಿಶ್ವವಿದ್ಯಾಲಯಗಳ ಸ್ಥಳೀಯ ಯೋಜನೆಯ ಅನುಗುಣವಾಗಿ ಪರೀಕ್ಷೆಯನ್ನು ನಡೆಸಿ, ಅತಿ ಶೀಘ್ರದಲ್ಲಿ ಫಲಿತಾಂಶವನ್ನು ನೀಡಬೇಕು. ಅಂಕಪಟ್ಟಿಗಳು ಕಾಲಕಾಲಕ್ಕೆ ಸಿಗುವಂತಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಬೇಕಿದೆ. ವಿಶ್ವವಿದ್ಯಾಲಯಗಳು ಶೀಘ್ರವಾಗಿ ಫಲಿತಾಂಶವನ್ನು ನೀಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೊಸ ಪ್ರವೇಶಾತಿ ಹಾಗೂ ಹೊಸ ಉದ್ಯೋಗಕ್ಕೆ ಸೇರುವ ಸಂದರ್ಭದಲ್ಲಿ ಯಾವುದೇ ತೊಂದರೆಗಳು ಉಂಟಾಗದಂv Éಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಡಲಾಯಿತು. ವಿಶ್ವವಿದ್ಯಾಲಯಗಳು ನಿಶ್ಚಿತ ಮಾದರಿಯಲ್ಲಿ ಅಂಕ ಪಟ್ಟಿಗಳನ್ನು ಅಪೆÇ್ಲೀಡ್ ಮಾಡಬೇಕು ಎಂದು ಅಭಿಪ್ರಾಯ ಪಡಲಾಯಿತು. ದುಂಡು ಮೇಜಿನ ಸಭೆಯಲ್ಲಿ ಉನ್ನತ ಶಿಕ್ಷಣ ಹಾಗೂ ವಿವಿಧ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಯುಯು ಸಿ ಎಂ ಎಸ್ ತಂತ್ರಾಂಶದಲ್ಲಿ ವೇಳಾಪಟ್ಟಿಯನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರಿಣಿತ ಉದ್ಯೋಗಿಗಳನ್ನು ನಿಯೋಜಿಸಬೇಕು. ಸರ್ಕಾರ ಹಾಗೂ ವಿಶ್ವವಿದ್ಯಾಲಯವು ವಿದ್ಯಾರ್ಥಿ ಸ್ನೇಹ-ಶಿಕ್ಷಕ ಸ್ನೇಹ-ಶಿಕ್ಷಣ ಸ್ನೇಹಿ ವಾತಾವರಣವನ್ನು ನಿರ್ಮಿಸಬೇಕೆಂದು ಅಭಿಪ್ರಾಯಪಡಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖರಾದ ಸಿದ್ದು ಪತ್ತಾರ, ಕವಿತಾ ಬಿರಾದಾರ, ಹನಮಂತ ಬಗಲಿ, ಮಲ್ಲಿಕಾರ್ಜುನ ಮಾಳಿ, ಅಭಿಷೇಕ ಬಿರಾದಾರ, ಮಂಜುನಾಥ ಹಳ್ಳಿ, ಪೂಜಾ ವೀರಶೆಟ್ಟಿ, ಐಶ್ವರ್ಯ, ಇತರರು ಉಪಸ್ಥಿತರಿದ್ದರು.