ಒಳಚರಂಡಿ ವ್ಯವಸ್ಥೆ ಸರಿಪಡಿಸಿ ಶಾಸಕ ಟಿ.ಎಸ್.ಶ್ರೀವತ್ಸ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.12:- 43 ನೇ ವಾರ್ಡ್ ನ ವ್ಯಾಪ್ತಿಯ ಶಾರದದೇವಿ ನಗರ, ಜನತಾ ನಗರ, ಟಿ.ಕೆ ಲೇ ಔಟ್, ನ ಸುತ್ತಮುತ್ತ ಪಾದಯಾತ್ರೆ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಬೆಳ್ಳಗೆ ಯಿಂದ ಸಂಜೆಯವರೆಗೂ ಪಾದಯಾತ್ರೆ ಮಾಡಲಾಯಿತು. ಪಾದಯಾತ್ರೆ ಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಒಳಚರಂಡಿ ಅವೈಜ್ಞಾನಿಕ ವಾಗಿದ್ದು ಮಳೆ ಬಂದಂತಹ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಅನಾನುಕೂಲ ವಾಗಲಿದ್ದು ಈ ಕೂಡಲೆ ಸರಿಪಡಿಸಿ ಎಂದು ತಿಳಿಸಿದರು.
ಹಾಗೇಯೆ ವ್ಯಾಪ್ತಿಯಲ್ಲಿರುವ ಪಾರ್ಕಗಳಲ್ಲಿ ರಾತ್ರಿಸಮಯ ಪುಂಡ ಯುವಕರ ಹಾವಳಿ ಹೆಚ್ಚಾಗಿದ್ದು ಪೆÇೀಲಿಸ್ ಹೆಚ್ಚು ಗಸ್ತುಕೊಡಬೇಕೆಂದರು, ಖಾಲಿ ನಿವೇಶನ ಇರುವ ರೆವಿನ್ಯೂ ಮನೆಗಳ ಸುತ್ತ ಮುತ್ತ ಕಸ ಹಾಕಬಾರದು ಎಂದು ತಿಳಿಸಿದರು.
ಕೃಷ್ಣ ಮೂರ್ತಿ ಬಡಾವಣೆಯಲ್ಲಿ ಮರಗಳು ಬೆಳದಿದ್ದು ಕೂಡಲೆ ಟ್ರಿಂ ಮಾಡುವ ಮೂಲಕ ಸರಿಪಡಿಸಬೇಕು ಎಂದರು.
ಸಂಧರ್ಭದಲ್ಲಿ ಶಾಸಕ ಟಿ.ಎಸ್. ಶ್ರೀ ವತ್ಸ, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ಮುಖಂಡರಾದ ಜೋಗಿ ಮಂಜು, ಶಿವಣ್ಣ, ಮಧು ಕೆಂಚ, ರಮೇಶ್ ,ಬಸವರಾಜು, ಈರೇಗೌಡ,ಚಂದ್ರಪ್ಪ, ಲೋಹಿತ್, ಶ್ರೀನಿವಾಸ್, ಪೂರ್ಣಿಮಾ, ಕಿಶೋರ್, ಪ್ರದೀಪ್, ಶಿವರಾಜ್ ರಾವ್, ರಮೇಶ್, ಜಯರಾಮ್, ಸತ್ಯಾನಂದ ವಿಟ್ಟು, ಹಾಗೂ ಅಧಿಕಾರಿಗಳು ಇದ್ದರು.