ಮೈಸೂರು-ಮನುಮಧುರೈ ನಡುವಿನ ಹೊಸ ರೈಲಿಗೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.12:- ಮೈಸೂರು-ಮನಮಧುರೈ ನಡುವೆ ಸಂಚರಿಸುವ ನೂತನ ರೈಲಿಗೆ ಸಂಸದ ಪ್ರತಾಪ ಸಿಂಹ ನಗರದ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಿದರು.
ಮೈಸೂರಿನಿಂದ ರಾಮೇಶ್ವರಕ್ಕೆ ನೇರ ರೈಲು ಸಂಚಾರ ಇದಾಗಿದ್ದು, ಸಂಜೆ 6.30ಕ್ಕೆ ರಾಮೇಶ್ವರದ ಕಡೆ ತೆರಳಲಿದೆ. ರಾಮೇಶ್ವರದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಸಧ್ಯಕ್ಕೆ ತಮಿಳುನಾಡಿನ ಮನಮಧುರೈವರೆಗೆ ರೈಲು ಸಂಚಾರ ಮಾಡಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ನೇರ ರಾಮೇಶ್ವರದ ವರೆಗೂ ಸಂಚರಿಸಲಿದೆ.
ಕಳೆದ ಹತ್ತು ವರ್ಷಗಳಲ್ಲಿ ಮೈಸೂರಿಗೆ ತಂದಿರುವ ನನ್ನ ಪ್ರಯತ್ನದಿಂದ ತಂದ 12 ನೇ ರೈಲು ಇದಾಗಿದೆ. ಮೈಸೂರು ರೈಲು ನಿಲ್ದಾಣ ಬಹಳ ಸಣ್ಣದಾಗಿರುವ ಪರಿಣಾಮ ನಾಗನಹಳ್ಳಿ ಸ್ಯಾಟಲೈಟ್ ರೈಲು ನಿಲ್ದಾಣ ಪ್ರಾರಂಭವಾಯಿತು. ಮೈಸೂರು ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣದ ರೀತಿಯಲ್ಲಿ ಕಾಣುವಂತೆ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಎಲ್ಲ ಇಲಾಖೆಯ ಸಹಾಯ, ಸಹಕಾರ ಇದೆ ಎಂದು ಸಂಸದ ಪ್ರತಾಪಸಿಂಹ ಪ್ರತಿಕ್ರಿಯಿಸಿದರು.
ರೈಲು ಎಲ್ಲೆಲ್ಲಿ ನಿಲುಗಡೆ:
ಪ್ರಯಾಣಿಕರ ಬೇಡಿಕೆ ಮೇರೆಗೆ ಚಾಲನೆಗೊಂಡ ಮೈಸೂರು-ಮನಮಧುರೈ ಸಂಜೆ 6.35ಕ್ಕೆ ಮೈಸೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 9.10ಕ್ಕೆ ಮನಮಧುರೈ ತಲುಪಲಿದೆ. ಮರು ದಿನ ಮಧ್ಯಾಹ್ನ 12 ಗಂಟೆಗೆ ಮನಮಧುರೈನಿಂದ ಹೊರಟು ಮರು ದಿನ ರಾತ್ರಿ 1.55ಕ್ಕೆ ಮೈಸೂರು ನಿಲ್ದಾಣ ತಲುಪಲಿದೆ.
ಈ ರೈಲು ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಬಂಗಾರಪೇಟೆ, ತಿರುಪತ್ತೂರು, ಸೇಲಂ, ನಾಮಕ್ಕಲ್, ತಿರುಚ್ಚಿರಾಪಳ್ಳಿ, ದಿಂಡಿಗಲ್ ಮಧುರೈ ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.
ವಿಶೇಷ ರೈಲಿನಲ್ಲಿ ಎರಡನೇಯ ಹವಾನಿಯಂತ್ರಿಕ ದರ್ಜೆಯ ಎರಡು, ಮೂರನೇ ಹವಾನಿಯಂತ್ರಿತ ದರ್ಜೆಯ 6, ಸ್ವೀಪರ್ ಕ್ಲಾಸ್‍ನ 9, ಸಾಮಾನ್ಯ ದ್ವಿತೀಯ ದರ್ಜೆಯ 2 ಹಾಗೂ ಬ್ರೇಕ್ ವ್ಯಾನ್ ಕಮ್ ಜನರೇಟರ್ ಕಾರು 2 ಸೇರಿದಂತೆ ಒಟ್ಟು 21ಬೋಗಿಗಳನ್ನು ಒಳಗೊಂಡಿದೆ.
ಮೋದಿ ಇಲ್ಲದೆ ಇದ್ದರೆ ನಾನು ಜೀರೋ:
ಮೋದಿಜಿ ಇಲ್ಲದೆ ಇದ್ದರೆ ಪ್ರತಾಪ್ ಸಿಂಹ ಜೀರೋ ಮೋದಿಜಿ ಅವರ ಹೆಸರಿನಲ್ಲಿ ಗೆದ್ದಿರುವವನು ನಾನು ಅವರು ಕೊಟ್ಟ ಯೋಜನೆಯನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಪ್ರಧಾನಿ ಮೋದಿಜಿ ಅವರು ಇಲ್ಲದೆ ಇದ್ದರೇ ನಾನು ಏನೂ ಅಲ್ಲ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಮಾದ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಮೋದಿ ಅವರ ಆಶೀರ್ವಾದದಿಂದ ಇಲ್ಲಿವರೆಗೆ ಎರಡು ಬಾರಿ ಸಂಸದನಾಗಿದ್ದೆನೆ. ಮೂರನೇ ಬಾರಿಯೂ ರಾಜ್ಯ ನಾಯಕರು ಹಾಗೂ ಕೇಂದ್ರದ ನಾಯಕರು ನನಗೆ ಅವಕಾಶ ಕೊಡುವ ವಿಶ್ವಾಸ ಇದೆ. ನನ್ನ ಕೆಲಸದ ಬಗ್ಗೆ ಪ್ರಧಾನಿ ಅವರಿಗೆ ಅರಿವು ಇದೆ ಆದ್ದರಿಂದ ಈ ಬಾರಿಯೂ ನಂಗೆ ಆಶೀರ್ವಾದ ಮಾಡುವುದು ವಿಶ್ವಾಸ ಇದೆ ಎಂದು ಹೇಳಿದರು.
ಮೋದಿ ಹೆಸರಿನಲ್ಲಿ ನಾನು ಎರಡು ಬಾರಿ ಗೆದ್ದಿರುವೇ ಮೋದಿ ಅವರು ನನ್ನ ಪಾಲಿಗೆ ಹಾಗೂ ಪಕ್ಷದ ಪಾಲಿಗೆ ದೇವರು ಇದ್ದಹಾಗೆ ಆಗಿದ್ದಾರೆ. ಮೋದಿಜಿ ಅವರು ಎಲ್ಲಾ ಅಂಶಗಳ ಪರಿಗಣನೆಗೆ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ ಅವರ ಹೆಸರಿನಲ್ಲಿ ನಾನು ಗೆದ್ದಿರುವುದು ನಾನೇ ಊರಿಗೆಲ್ಲಾ ಪಟೇಲ ಎಂದು ಹೇಳಿಕೊಂಡು ತಿರುಗಾಡಲು ಆಗುವುದಿಲ್ಲ ನನ್ನ ಪಾಲಿಗೆ ಹಾಗೂ ಪಕ್ಷದ ಪಾಲಿಗೆ ಮೋದಿಜಿ ಅವರು ದೇವರು ಇದ್ದ ಹಾಗೆ ಎಂದರು.
ಮೈಸೂರಿಗೆ ಅಧಿದೇವತೆ ಚಾಮುಂಡೇಶ್ವರಿ ತಾಯಿ, ಹಾಗೂ ಕರುನಾಡಿನ ಕಾವೇರಿ ತಾಯಿ ಹಾಗೂ ಮೋದಿಜಿ ಅವರ ಆಶೀರ್ವಾದ ನನ್ನ ಮೇಲೆ ಇದೆ.ಗೆಲ್ಲುವ ಕುದುರೆ ಎಂದರೆ ಆಕಾಂಕ್ಷಿಗಳು ಅಂದರೆ ಗೆಲ್ಲುವ ಕುದುರೆಯನ್ನ ಏರುವವರು ಬಹಳ ಇರುತ್ತಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು ಮೈಸೂರಿನಲ್ಲಿ ಬಿಜೆಪಿ ಗೆಲುವಿಗೆ ಮೋದಿಜಿ ಅವರ ಯೋಜನೆ ಮುಖಾಂತರ ನಾನು ಮಾಡಿದ್ದೇನೆ. ಕಳೆದ ಹತ್ತು ವರ್ಷದಿಂದ ಮೈಸೂರು ಕೊಡಗು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ಬಿಜೆಪಿ ಭದ್ರಕೋಟೆಯನ್ನು ನಾನು ಮಾಡಿದ್ದೇನೆ. ಈ ಬಾರಿಯೂ ನನ್ನ ಹತ್ತು ವರ್ಷ ರಿಪೆÇೀರ್ಟ್ ಕಾರ್ಡ್ ನೋಡಿ ಈ ಬಾರಿಯೂ ನನಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂಪ್ಪನವರನ್ನು ಕೇಂದ್ರದ ಮೋದಿಜಿ ಅವರು ಹಾಗೂ ಹಿರಿಯರು ನನ್ನ ಕೆಲಸ ನೋಡಿ ಈ ಬಾರಿಯೂ ನನ್ನಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲ: ರಾಜ್ಯದಲ್ಲಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ಲೋಕಸಭೆಗೆ ಅಭ್ಯರ್ಥಿಗಳೇ ಇಲ್ಲ ಆದರೂ ಸೋಲುವ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗಾಗಿ ಹೊಡೆದಾಟ ನಡೆಯುತ್ತಿರುವಾಗಲೇ ಇನ್ನೂ ಗೆಲ್ಲುವ ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಇದ್ದೆ ಇರುತ್ತಾರೆ ಯಾರು ಅಭ್ಯರ್ಥಿಗಳು ಎಂಬುದನ್ನ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿ ಇರಬೇಕು ಎಂದರು.
ಮೈಸೂರು ವಿಭಾಗೀಯ ರೈಲ್ವೆ ನಿಯಂತ್ರಣಾಧಿಕಾರಿ ಶಿಲ್ಪಿ ಅಗರವಾಲ್, ಸಹಾಯಕ ರೈಲ್ವೆ ನಿಯಂತ್ರಣಾಧಿಕಾರಿಗಳಾದ ವಿನಾಯಕ ನಾಯಕ್, ಇ.ವಿಜಯ, ಹಿರಿಯ ವ್ಯವಸ್ಥಾಪಕರಾದ ಅಂಕಿತಾಶರ್ಮ, ಸಾರ್ವಜನಿಕ ಸಂಪರ್ಕಾಧಿಕಾರಿ ಲೋಹಿತೇಶ್ವರ ಇತರು ಇದ್ದರು.