ವಿಶ್ವ ಫ್ಲಂಬರ್ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೧೨: ಜಿಲ್ಲಾ ಕಾವೇರಿ ಮಾತಾ ಪ್ಲಂಬರ್ಸ್ ಕಾರ್ಮಿಕರ ಸಂಘದಿAದ ಸಂಘದ ಕಚೇರಿಯಲ್ಲಿ ವಿಶ್ವ ಪ್ಲಂಬರ್ ದಿನಾಚರಣೆ ಹಾಗೂ ವಿಶ್ವ ಜಲ ಸಂಗ್ರಹಣಾ ದಿನವನ್ನು ಸರಳವಾಗಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ.ಶೆಟ್ಟರ್, ನೀರು ನಮ್ಮೆಲ್ಲರ ಜೀವನಾಡಿ, ನೀರು ಉಳಿಸುವುದರಿಂದ ಜನ ಜಾನುವಾರುಗಳ ಜೀವ ಉಳಿಸಿದಂತೆ, ನೀರನ್ನು ವ್ಯರ್ಥ ಮಾಡದಂತೆ ಬಳಕೆ ಮಾಡಬೇಕು. ನೀರಿದ್ದರೆ ನಮ್ಮ ಮುಂದಿನ ಭವಿಷ್ಯ ಇದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ನೀರಿನ ಸಂರಕ್ಷಣೆ, ದೇಶದ ಭದ್ರತೆಗೆ ಸಮಾ. ನೀರು ಅಮೃತಕ್ಕೆ ಸಮಾನ. ನೀರು ಪೋಲಾದರೆ ಮಾನವನ ಜೀವನ ವ್ಯರ್ಥವಾದಂತೆ. ಅದ್ದರಿಂದ ನೀರಿನ ರಕ್ಷಣೆ, ಉಳಿವು ನಮ್ಮೆಲ್ಲರ ಕರ್ತವ್ಯ ಎಂದರು.ಈ ವೇಳೆ ಫ್ಲಂಬರ್ ಸಂಘದ ಅಧ್ಯಕ್ಷ ಎಸ್.ಬಿ.ರುದ್ರೇಶ್, ಖಜಾಂಚಿ ಕೆ.ಜಿ.ಡಿ.ಬಸವರಜ್, ಕಾರ್ಯದರ್ಶಿ ಎಸ್.ಹೊಳೆಬಸಪ್ಪ, ಉಪಾಧ್ಯಕ್ಷ ಎಸ್.ಎಂ.ಸಿದ್ದಲಿAಗಪ್ಪ, ಎಸ್.ಶರಣಪ್ಪ, ಎಸ್.ರಾಜು, ಸಂಘಟನಾ ಕಾರ್ಯದರ್ಶಿ ಹೆಚ್.ಆರ್.ಬಸವರಾಜ, ಅಣ್ಣಪ್ಪ, ನಿರ್ದೇಶಕರಾದ ವೀರೇಶ್ ಮುತ್ತಿಗೆ ಎಸ್.ಚಂದ್ರಶೇಖರ್, ಐ.ಎಂ.ಗಿರೀಶ್ ಇತರೆ ಪದಾಧಿಕಾರಿಗಳು ಇದ್ದರು.