ಮೋದಿಯವರ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ: ಸಂಸದ ಜಾಧವ್
ಕಲಬುರಗಿ:ಮಾ.11: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಹೀಗಾಗಿ ಮಹಿಳೆಯರ ಹೊಸ ಯುಗ ಬಿಜೆಪಿ ಸರ್ಕಾರದಲ್ಲಿ ಆರಂಭಗೊಂಡಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದರು.
ನಗರದಲ್ಲಿ ಸೋಮವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ “ಮಹಿಳೆಯರಲ್ಲಿ ಹೂಡಿಕೆ ಪ್ರಗತಿ ವರ್ಧಿಸಿ” ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಶಸ್ತಿ ನೀಡಿದರು. ರಾಷ್ಟ್ರಪತಿ, ಹಣಕಾಸು ಸಚಿವ ಸ್ಥಾನಗಂತಹ ಉನ್ನತ ಹುದ್ದೆಗಳು ಮಹಿಳೆಯರಿಗೆ ಸಂದಿವೆ. ಮಹಿಳೆಯರಿಗೆ ಶೇಕಡಾ 33ರಷ್ಟು ಪ್ರತ್ಯೇಕ ಮೀಸಲಾತಿ ನೀಡುವ ವಿಶೇಷ ಮಸೂದೆ ನಾರಿ ಶಕ್ತಿ ವಂದನ್ ಅಭಿನಂದನ್ ಬಿಲ್‍ಗೆ ಸಂಸತ್ತಿನಲ್ಲಿ ಅಂಗೀಕಾರ ನೀಡಲಾಗಿದೆ. ಇದು ಐತಿಹಾಸಿಕ ನಿರ್ಣಯವಾಗಿದೆ. ಉಜ್ವಲಾ ಯೋಜನೆ, ಮುದ್ರಾ ಯೋಜನೆ ಮುಂತಾದ ಕೇಂದ್ರದ ಹಲವು ಯೋಜನೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಮಹಿಳೆಯರು ಸ್ವಾಭಿಮಾನ ಮತ್ತು ಸ್ವಾವಲಂಬನೆ ಬದುಕು ಮಾಡಲು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ವಿಶ್ವದಾದ್ಯಂತ ಮಹಿಳೆಯರ ಹಕ್ಕು ಸಂರಕ್ಷಣೆ ಮತ್ತು ಲಿಂಗಸಮಾನತೆಗಾಗಿ ಜಾಗೃತಿ ಮೂಡಿಸುವ ಮಹಿಳಾ ದಿನಾಚರಣೆಯಿಂದ ಮಹಿಳೆಯರಲ್ಲಿ ಸ್ವಾಬಲಂಬನೆಯ ಬದುಕಿಗೆ ಹೆಜ್ಜೆ ಇಡುವಂತೆ ಪ್ರೇರಣೆ ನೀಡಲಾಗುತ್ತದೆ. ಭಾರತ ಮಹಿಳೆಯರಿಗೆ ಅತ್ಯುನ್ನತ ಸ್ಥಾನ ಗೌರವವನ್ನು ನೀಡಿದ ರಾಷ್ಟ್ರವಾಗಿದೆ ಎಂದರು.
ಆದರ್ಶ ಮಹಿಳೆಯರ ಇತಿಹಾಸವನ್ನು ಹೊಂದಿದ ಭಾರತದಲ್ಲಿ ಈಗ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ದೇಶದ ಪ್ರಗತಿಗೆ ಅವರ ಕೊಡುಗೆ ಗಣನೀಯವಾಗಿದೆ. ಭಾರತದ ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿ ಸಮಾನತೆ ಮತ್ತು ಮಹಿಳೆಯರಲ್ಲಿ ಸ್ವಾಭಿಮಾನದ ಬದುಕು ಗಟ್ಟಿಗೊಂಡಿದೆ ಎಂದು ಅವರು ತಿಳಿಸಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ್ ಪಾಟೀಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಮಹಿಳೆಯರಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿದರೆ ಆರ್ಥಿಕವಾಗಿ ಸಮಾಜ ಅಭಿವೃದ್ಧಿ ಹೊಂದಲು ಮಹಿಳೆಯು ಅನೇಕ ಕೊಡುಗೆಗಳನ್ನು ನೀಡುವಳು. ಇಂದಿನ ಮುಂದುವರೆದ ವೈಜ್ಞಾನಿಕ ತಂತ್ರಜ್ಞಾನದಲ್ಲಿ ಕೈಗಾರಿಕೋದ್ಯಮದಲ್ಲಿ ಮಹಿಳೆಯರ ಪಾತ್ರವು ಹೆಚ್ಚಾಗಿದೆ. ಈ ಭಾಗದ ಮಹಿಳೆಯರು ಕೈಗಾರಿಕೋದ್ಯಮೆಯಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗಾಗಿ ಕೆ-ಲ್ಯಾಂಪ್ ಸಂಸ್ಥೆ ಸ್ಥಾಪಿಸಲಾಗಿದ್ದು ಇದರಲ್ಲಿ ಸುಮಾರು 200 ಮಹಿಳಾ ಉದ್ಯಮಿಗಳು ಕಾರ್ಖಾನೆಗಳನ್ನು ಆರಂಭಿಸಿದ್ದಾರೆ. ಕೈಗಾರಿಕೆಗಳ ಅಭಿವೃದ್ಧಿ, ತರಬೇತಿ ಮತ್ತು ಉದ್ಯೋಗಗಳ ನಿರ್ಮಿಸಲು ಕೇಂದ್ರಿಯ ವಿಶ್ವವಿದ್ಯಾಲಯದ ಜೊತೆಗೆ ಮೆಮೊರಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮಹಿಳೆ ಇಲ್ಲದೆ ಯಾವುದೇ ಅಭಿವೃದ್ದಿ ಬಗ್ಗೆ ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಮ್ಮ ಪ್ರಧಾನಿ “ಬೇಟಿ ಬಚಾವ್ ಬೇಟಿ ಪಢಾವ್” ಕಾರ್ಯಕ್ರಮಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಭಾರತದ ಸಿಂದು ಕಣಿವೆ ನಾಗರಿಕತೆಯಿಂದಲೂ ಮಹಿಳೆಯರನ್ನು ಪೂಜನೀಯ ಹಾಗೂ ತಾಯಿ ಸ್ವರೂಪದಲ್ಲಿ ಕಾಣಲಾಗುತ್ತಿದೆ. ಮಹಿಳಾ ಮೀಸಲಾತಿಯಿಂದ ಸ್ಥಳೀಯ ಸರಕಾರದಿಂದ ಸಂಸತ್ತಿನವರೆಗೆ ಹಾಗೂ ಮಹಿಳಾ ಸಬಲೀಕರಣದ ನಿಜ ಸ್ವರೂಪವನ್ನು ಭಾರತ ದೇಶದಲ್ಲಿ ಕಾಣಲು ಸಾಧ್ಯವಾಗಲಿದೆ ಎಂದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಹೆಚ್ಚಾಗಿದ್ದು, ಈಗ ಎಲ್ಲ ಕುಟುಂಬವು ಹುಡುಗಿಯರ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡುತ್ತಿದೆ. 1980ರ ಸಾಲಿಗೆ ಹೋಲಿಸಿದಾಗ ಸಾಕಷ್ಟು ಬದಲಾವಣೆಯನ್ನು ಹೊಂದಿದೆ. ಮಹಿಳೆಯರು ಎಲ್ಲಾ ವಲಯಗಳಲ್ಲಿ ಭಾಗವಹಿಸಿಕೆ ಹೆಚ್ಚಾಗಿರುವುದರಿಂದ ಭಾರತದ ಆರ್ಥಿಕ ಬೆಳವಣಿಗೆ ಹೊಂದುತ್ತಿದೆ. ಕೈಗಾರಿಕೋದ್ಯಮ ಅಭಿವೃದ್ಧಿಗೆ ಸನ್ಮಾನ ಪ್ರಧಾನ ಮಂತ್ರಿಗಳು ಮುದ್ರಾ, ಎಸ್‍ಎಚ್‍ಜಿ, ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಎಂಬ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕೇಂದ್ರಿ ವಿಶ್ವವಿದ್ಯಾಲಯ ಕರ್ನಾಟಕ ಹಾಗೂ ಕೆಕೆಸಿಸಿಐ ಮಧ್ಯೆ ಮೆಮೊರಂಡಮ್ ಆಫ್ ಅಂಡರ್‍ಸ್ಟ್ಯಾಂಡಿಂಗ್ ಒಪ್ಪಂದಕ್ಕೆ ಸಹಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಪೆÇ್ರ. ಪುಷ್ಪಾ ಎಂ. ಸವದತ್ತಿ ಮತ್ತು ಡಾ. ಮೊಹಮ್ಮದ್ ಝೋಹೈರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮುಕ್ತಾ ಆರ್. ಜಗರಕಲ್ ಹಾಗೂ ಚಂದನ್‍ಬಾಲಾ ಎಸ್. ಸೇಥಿಯ, ಮಂಜುನಾಥ್ ಜೇವರ್ಗಿ, ಉತ್ತಮ್ ಬಜಾಜ್, ಪೆÇ್ರ. ಆರ್.ಆರ್. ಬಿರಾದಾರ್, ಡಾ. ಶಫಿಯಾ ಪರ್ವೀನ್, ಡಾ. ಸುಷ್ಮಾ ಎಚ್., ಮತ್ತು ಭಾರತಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.