ಕುಕನೂರು  : ಸ್ವಚ್ಚ ಭಾರತ ಯೋಜನೆ ಮರೆತ  ಪಟ್ಟಣ ಪಂಚಾಯತ್ !
ಸಂಜೆವಾಣಿ ವಾರ್ತೆ
ಕುಕನೂರು, ಮಾ.11: ಇಲ್ಲಿಯ ೮ ನೆಯ ವಾಡಿ೯ನ ಅಂಬೇಡ್ಕರ್ ವೃತ್ತದಿಂದ ಶಿರೂರು ಅವರ ಮನೆತನ ವರೆಗೆ ರಸ್ತೆ ಮತ್ತು ಚರಂಡಿಯನ್ನು ಶಾಶ್ವತ ವಾದ ರೀತಿಯಲ್ಲಿ ಅಭಿವೃದ್ದಿ ಪಡಿಸಿ ಜನರ ನೆಮ್ಮದಿಗೆ ನೆರ ವಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.       ಸರಕಾರದ ಮಹತ್ವಕಾಂಕ್ಷೆಯ ಸ್ವಚ್ಚ  ಭಾರತ ಯೋಜನೆ ಅನ್ವಯಿಸುವುದಿಲ್ಲ ವೇ ಇಲ್ಲಿ ಎನ್ನುವ ಮಾತು ಕೇಳಿ ಬರುತ್ತದೆ. 
ರಸ್ತೆಯ ಅಕ್ಕ ಪಕ್ಕದಲ್ಲಿ ಅರೆ ಬರೆ ಚರಂಡಿ ವ್ಯವಸ್ಥೆ ಮಾಡಲಾಗಿದೆ, ಎರಡು ಮೂರು ವಾಡಿ೯ನ ನಿವಾಸಿಗಳು ಇದೇ ಚರಂಡಿಯಲ್ಲಿಯೆ ಒಣ ಕಸ ಹಸಿ ಹಾಕಿ ಚರಂಡಿ ನೀರು ಬ್ಲಾಕ್ ಆಗುತ್ತದೆ ,ಅಲ್ಲದೆ ಕಸ ಚೆಲ್ಲುವ ವ್ಯವಸ್ಥೆ ಇಲ್ಲ ಹಾಗಾಗಿ ಜನರು ರಸ್ತೆಯ ಅಕ್ಕಪಕ್ಕದಲ್ಲಿ ಕಸ ಮುಸುರಿ ಚೆಲ್ಲುವ ಮೂಲಕ ಈ ಪ್ರದೇಶವನ್ನು ಗಬ್ಬು ನಾರುವಂತಾಗಿದೆ. ಹಗಲು ರಾತ್ರಿ ಎನ್ನದೆ ಸೊಳ್ಳೆ, ನೊಣ, ಮತ್ತಿತರ ಕ್ರಿಮಿ ಕೀಟಗಳ ದಾಳಿಯಿಂದ ಜನರು ನಲುಗಿ ಹೋಗಿದ್ದಾರೆ.  
ಪೌರ ಕಾರ್ಮಿಕರಿಂದ ಆಗಾಗ ಸ್ವಚ್ಛತೆ ನಡೆಯುತ್ತಿದೆ ಆದ್ರೂ ಸಹ ಅದು ತಾತ್ಕಾಲಿಕ. ಶಾಶ್ವತ ವ್ಯವಸ್ತೆ ಕೊರತೆಯಿಂದ ಇಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿ ಜನರು ಮಲ ಮೂತ್ರ ವಿಸಜ೯ನೆ  ಮತ್ತೊಂದೆಡೆ ಕಸ ಮುಸುರಿ ಚೆಲ್ಲುವ ಮೂಲಕ ವಾತಾವರಣವನ್ನು ಅಶುದ್ದ ಗೊಳಿಸಿದ್ದಾರೆ,  ಚರಂಡಿ ನೀರು ಮುಂದೆ ಹರಿಯುತ್ತಿಲ್ಲ, ಕಲುಷಿತ ವಾತಾವರಣದಲ್ಲಿ ಬದುಕುವ ದುಸ್ಥಿತಿ ಉಂಟಾಗಿದೆ.ನಗರ ಸಭೆಯ ಅಧಿಕಾರಿಗಳಿಗೆ ಈ ಎಲ್ಲಾ ಅಂಶಗಳನ್ನು ತಿಳಿಸಿದರು ಸಹ ಕ್ಯಾರೇ ಅನ್ನುತ್ತಿಲ್ಲ.  ಆಶುದ್ದ ಹವಾ ಮತ್ತು  ದುವಾ೯ಸನೆಗೆ        ರೋಷಿಗೊಂಡ್ ಜನರು  ಮತ್ತು ಮಕ್ಕಳು ಹಲವಾರು ರೋಗ ರುಜಿನಗಳಿಂದ ಬಳಲುವ ಸ್ಥಿತಿ ಎದುರಾಗಿದೆ.  ಇದೇ ಮಾಗ ೯ದಲ್ಲೀ  ಸಂಚರಿಸುವ ಭಕ್ತರು ಹಾಗೂ ವಿವಿಧ ಗ್ರಾಮಸ್ತರು  ಪಂಚಾಯತ್  ವ್ಯವಸ್ಥೆ ಶಪಿಸುತ್ತ ಸಂಚಾರ ಮಾಡುತ್ತಾರೆ,  ಗ್ರಾಮ ಪಂಚಾಯತಿ ಆಡಳಿತ ಇದ್ದಾಗ ಇಂದು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೇಗನೆ ಸ್ಪಂದಿಸಬೇಕು ಎಂದು ಮನೋಭಾವ ಇತ್ತು ಈಗ ಊರು ಈಗ ಪಟ್ಟಣ ಪಂಚಾಯತ್ ಆಗಿ ಬದಲಾಗಿದೆ. ಆದ್ರೂ ಸಹ ಕ್ಯಾರೇ ಅನ್ನುತ್ತಿಲ್ಲ ಇದೇ ರೀತಿ ಅಭಿವೃದ್ದಿ ಪಡಿಸುವುದು ವಿಳಂಬ ವಾದರೆ ಸಾವ೯ಜನಿಕರು ಸೇರಿ ಪಂಚಾಯತ್ ಮುಖ್ಯಾಧಿಕಾರಿ ವೀರುದ್ದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಸ್ಥಳೀಯರಾದ ಶೇಖರ್ ಗೊರಲೆ ಕೂಪ್ಪ, ಮಹಾಂತೇಶ್ ಬಾರಿಗಿ ಡ ದ, ಮಲ್ಲಿಕಾಜು೯ನ , ನಿಂಗರಾಜು ಗೊರಲೇಕೊಪ್ಪ, ಸಾಗರ್ ಗುಳದಳ್ಳಿ ಸೇರಿದಂತೆ ಹಲವಾರು ಜನರು ಎಚ್ಚರಿಸಿದ್ದಾರೆ.