ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರುಹತಗುಂದಾ ಗ್ರಾಮದಲ್ಲಿ ರೈತರೊಂದಿಗೆ ಸಂವಾದ
ಕಲಬುರಗಿ:ಮಾ.11:ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಎಚ್. ಸಿ ಗಿರೀಶ ಅವರು ಶನಿವಾರ (ಮಾರ್ಚ್ 9 ರಂದು) ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಜಲಾನಯನ ಯೋಜನೆಗಳಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಕ್ಷೇತ್ರ ಭೇಟಿ ಕೈಗೊಂಡು, ವಿಶ್ವಬ್ಯಾಂಕ್ ನರೆವಿನ ರಿವಾರ್ಡ್ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಪಟ್ಟಣ ಹೋಬಳಿಯ ಹತಗುಂದಾ ಗ್ರಾಮದಲ್ಲಿ ರೈತರೊಂದಿಗೆ ಯೋಜನೆ ಉಪಯುಕ್ತತೆ ಬಗ್ಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಯೋಜನೆ ಪ್ರದೇಶದ ರೈತರಿಂದ ಯೋಜನೆ ಅನುμÁ್ಠನದ ಬಗ್ಗೆ ಅನಿಸಿಕೆ, ಯೋಜನೆಯ ಉಪಯುಕ್ತತೆ ಮತ್ತು ಸಲಹೆ ಪಡೆದರು.
ಜಲ ನೆಲ ಇದ್ದರೆ ಜೀವನ ಎಂಬ ಸಂದೇಶ ನೀಡುತ್ತಾ, ಜಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಇದರ ಸಂಪೂರ್ಣ ಸಂರಕ್ಷಣೆ ರಿವಾರ್ಡ ಯೋಜನೆಯಲ್ಲಿ ಕೈಗೊಂಡು ದೇಶದಲ್ಲೆ ಮಾದರಿಯಾಗಬೇಕೆಂದು ಸ್ಪೂರ್ತಿ ತುಂಬಿದರು. ಈ ಯೋಜನೆಯಲ್ಲಿ ನಿರ್ಮಿಸಿದ ಕ್ಷೇತ್ರ ಬದುಗಳ ಮೇಲೆ ಹಾಗೂ ನೆಡು ತೋಪು ಗಳಲ್ಲಿ ಭೂ-ಸಂಪನ್ಮೂಲ ಕಾರ್ಡ್‍ಗಳಲ್ಲಿ ಸೂಚಿಸಿರುವ ಅರಣ್ಯ ಗಿಡಗಳಾದ ಸಾಗವಾನಿ, ಮಹಾಗನಿ, ಹುಣಸೆ, ಬೇವು, ನೇರಳೆ, ನುಗ್ಗೆ, ಸಿತಾಫಲ ನೆಡಬೇಕೆಂದರು.
ಮಹಿಳೆಯರಿಗೆ ಜೀವನೋಪಾಯ ಅಭಿವೃದ್ಧಿಗಾಗಿ ಇಲಾಖೆಯಿಂದ ತರಬೇತಿ ಮತ್ತು ಸಹಾಯಧನದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಉಪಕರಣೆಗಳಾದ ಮಿನಿ ದಾಲಮಿಲ್, ಶಾವಿಗೆ, ರೊಟ್ಟಿ, ಖಾರಾ ಕುಟ್ಟುವ ಯಂತ್ರಗಳನ್ನು ಪಡೆಯಬೇಕೆಂದು ಸಲಹೆ ನೀಡಿದರು
ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಅವರು, ಹತಗುಂದಾ ಗ್ರಾಮದ ರೈತರ ಭೂ-ಸಂಪನ್ಮೂಲ ಕಾರ್ಡನಲ್ಲಿರುವ ವಿವಿಧ ಮಾಹಿತಿಗಳಾದ ಪೆÇೀಷಕಾಂಶ ಲಭ್ಯತೆ ಮತ್ತು ಕೋರತೆ, ಮಣ್ಣಿನ ಭೌತಿಕ ಮತ್ತು ರಾಸಾಯಿನಿಕ ಗುಣಧರ್ಮಗಳಾದ ಮಣ್ಣಿನ ಆಳ, ಬೂಮಿಯ ಇಳಿಜಾರು, ರಸಸಾರ, ಕ್ಷಾರತೆ ಮುಂತಾದುವುಗಳ ವಿವರ ತಿಳಿಸಿದರು. ಸರ್ವೆ ನಂ.ವಾರು ಬೆಳೆ ಸೂಕ್ತತೆ ಮತ್ತು ಅವಶ್ಯವಿರುವ ಮಣ್ಣು ಮತ್ತು ನೀರು ಸಂರಕ್ಷಣೆ ಕ್ರಮಗಳ ಬಗ್ಗೆಯು ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕರಾದ ಚಂದ್ರಕಾಂತ ಜೀವಣಗಿ ಅವರು ಮಾತನಾಡಿ, ರೈತರು ಸಕ್ರಿಯವಾಗಿ ಪಾಲ್ಗೊಂಡು ಯೋಜನೆ ಲಾಭ ಪಡೆಯಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಗ್ರಾಮ ಪಂಚಾಯಿತಿಯ ಸದಸ್ಯರಾದ ಪಾರ್ವತಿ ತುಕ್ಕಪ್ಪಾ, ಉಪ ಕೃಷಿ ನಿರ್ದೇಶಕರಾದ ಸೋಮಶೇಖರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕರಾದ ವಿಜಯಕುಮಾರ ಬೆಡಸೂರ, ಕೃಷಿ ಅಧಿಕಾರಿಯವರಾದ ಅಬ್ಬುಲ ಕರೀಮ್, ಸಹಾಯಕ ಕೃಷಿ ಅಧಿಕಾರಿಯವರಾದ ಅಬೀದ್, ರಾಹುಲ, ನಿಂಬೆಕ್ಕಾ ಮಹಿಳಾ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರಾದ ಶೋಭಾ ಭೀಮಾಶಂಕರ, ಸಿ.ಇ.ಓ. ಮಂಜುಳಾ ಕುಂಬಾರ, ಮೈರಾಡಾ ಸಂಸ್ಥೆಯ ಜಗದೇವಿ ಮತ್ತು ಹತಗುಂದಾ ಗ್ರಾಮದ ಹಿರಿಯ ಹಾಗೂ ಪ್ರಗತಿ ಪರ ರೈತರು ಪಾಲ್ಗೊಂಡರು.
ಹತಗುಂದಾ ಗ್ರಾಮದಲ್ಲಿ ರಿವಾರ್ಡ ಯೋಜನೆಯಡಿ ಕೈಗೊಂಡ ಬದು ನಿರ್ಮಾಣ ಮತ್ತು ಚೆಕ್ ಡ್ಯಾಮ್ ಕಾಮಗಾರಿಗಳನ್ನು ವೀಕ್ಷಿಸಿದರು. ನಂತರ ಹಡಗಿಲ್ ಹಾರುತಿ ಗ್ರಾಮದಲ್ಲಿ ಪ್ರವೇಶದ್ವಾರ ಚಟುವಟಿಕೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೀರು ಶುದ್ಧೀಕರಣ ಘಟಕ (RO Plant), ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಬೆಂಚುಗಳು, ಗೋಡೆ ಬರಹಗಳು, ಸೋಲಾರ ಬೀದಿ ದೀಪಗಳನ್ನು ವೀಕ್ಷಿಸಿದರು.