ವಿದ್ಯುತ್ ಸ್ಪರ್ಶ: ದಿನಗೂಲಿ ಕಾರ್ಮಿಕ ಸಾವು
ಕಲಬುರಗಿ,ಮಾ.11-ವಿದ್ಯುತ್ ಸ್ಪರ್ಶದಿಂದ ದಿನಗೂಲಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಸುಲೇಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಳ್ಳಿ (ಹೆಚ್) ಗ್ರಾಮದಲ್ಲಿ ಭಾನುವಾರ ನಡೆದಿದೆ.
ಚಿಂಚೋಳಿ ತಾಲ್ಲೂಕಿನ ಹೂವಿನಬಾವಿ ಗ್ರಾಮದ ಮಸ್ತಾನ್ (24) ಮೃತಪಟ್ಟವರು.
ಮಸ್ತಾನ್ ಗುತ್ತಿಗೆದಾರರೊಬ್ಬರ ಬಳಿ ಲೈನ್‍ಮನ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.