ಕಾರ್ಪೆಂಟರ ಅಂಗಡಿಗೆ ಬೆಂಕಿ ಅಪಾರ ಪ್ರಮಾಣದ ನಷ್ಟ
ಸೈದಾಪುರ:ಮಾ.11:ಪಟ್ಟಣದಲ್ಲಿನÀ ಕೃಷ್ಣಮೂರ್ತಿಯವರ ಕಾರ್ಪೆಟರ ಅಂಗಡಿ ಸೇರಿದಂತೆ ಅದಕ್ಕೆ ಹೊಂದಿಕೊಂಡ ಪಕ್ಕದ ಅಂಗಡಿಗಳಿಗೆ ಬೆಳಗಿನ ಜಾವದಲ್ಲಿ ಸಂಬವಿಸಿದ ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಬಡಗಿತನಕ್ಕೆ ಸೇರಿದ ವಿವಿಧ ಯಂತ್ರಗಳು ಹಾಗೂ ತಯಾರು ಮಾಡಿದ ಕಟ್ಟಡ ಸಾಮಾಗ್ರಿಗಳು, ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಯಾದಗಿರಿಯಿಂದ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಗೆ ಕಾರಣ ಹಾಗೂ ನಷ್ಟವಾಗಿರುವ ಬಗಗೆ ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
ಸೈದಾಪುರದಲ್ಲಿ ಅಗ್ನಿ ಶಾಮಕ ದಳ ಸ್ಥಾಪನೆಯಾಗಬೇಕು
ಪದೇ ಪದೇ ಪಟ್ಟಣದಲ್ಲಿ ಅಗ್ನಿ ಅವಘಡಗಳು ಸಂಬವಿಸುತ್ತೀವೆ. ದೂರದ ಯಾದಗಿರಿಯಿಂದ ಅಗ್ನಿ ಶಾಮಕ ಸಿಬ್ಬಂದಿ ಬಂದು ನಂದಿಸುವಷ್ಟರಲ್ಲಿ ನಷ್ಟ ಪ್ರಮಾಣದ ಹೆಚ್ಚಾಗುತ್ತಿದ್ದೂ ಕೂಡಲೇ ಸೈದಾಪುರದಲ್ಲಿ ಅಗ್ನಿ ಶಾಮಕ ದಳ ಕೇಂದ್ರ ಪ್ರಾರಂಭ ಮಾಡಬೇಕು. ಸಮೀಪದಲ್ಲಿಯೇ ಕಡೇಚೂರು ಹಾಗೂ ಬಾಡಿಯಾಲ ಕೈಗಾರಿಕಾ ಪ್ರದೇಶಗಳು ಇವೆ. ಇವುಗಳ ಸುರಕ್ಷತೆಗೆ ಕೂಡಲೇ ಸಂಬಂದಿಸಿದವರು ಕ್ರಮ ಕೈಗೊಂಡು ಅಗ್ನಿ ಶಾಮಕ ದಳ ಸ್ಥಾಪಿಸಬೇಕು ಎಂಬುವುದು ನಾಗರಿಕರದ್ದಾಗಿದೆ.