ಅಮರೇಶ್ವರ ಜಾತ್ರೆ ಪೌರಕಾರ್ಮಿಕರಿಗೆ ಸತ್ಕಾರ
ಔರಾದ್ :ಮಾ.11: ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಪ್ರಖ್ಯಾತಿಯ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆ ಕಾಪಾಡಿರುವ ಇಲ್ಲಿಯ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಭಾನುವಾರ ದೇವಸ್ಥಾನದಲ್ಲಿ ಗೌರವಿಸಲಾಯಿತು.
ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಶರಣಪ್ಪ ಪಂಚಾಕ್ಷರೆ ಮಾತನಾಡಿ, ಜಾತ್ರೆ ಯಶಸ್ವಿಗೆ ಎಲ್ಲರೂ ಸಹಕರಿಸಿದ್ದಾರೆ. ಆದ್ದರಿಂದ ಯಶಸ್ವಿಯಾಗಿದೆ. ಪಪಂ ಪೌರಕಾರ್ಮಿಕರು ಪಟ್ಟಣದ ಎಲ್ಲ ರಸ್ತೆಯಲ್ಲಿಯೂ ದಾಸೋಹ ವ್ಯವಸ್ಥೆ ಮಾಡಿದರೂ ಕಸ ಬೀಳದಂತೆ ನೋಡಿಕೊಂಡಿದ್ದಾರೆ. ಸಿಬ್ಬಂದಿಗಳ ಕಾರ್ಯಕ್ಕೆ ಎಲ್ಲರೂ ಮೆಚ್ಚಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ದತ್ತಾತ್ರೇಯ ಹವರಗೆ ಮಾತನಾಡಿ, ಅಮರೇಶ್ವರ ಜಾತ್ರೆಯಲ್ಲಿ ಪ್ರಥಮ ಬಾರಿ ಪೌರಕಾರ್ಮಿಕರನ್ನು ಗರುತಿಸಿ ಸತ್ಕರಿಸಲಾಗುತ್ತಿದೆ. ಇದು ಕಾರ್ಮಿಕರಿಗೆ ಪ್ರೇರಣೆ ನೀಡಿದಂತಾಗಿದೆ ಎಂದರು. ಪ್ರಮುಖರಾದ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಅಣದೂರೆ, ಶರಣಪ್ಪ ಪಾಟೀಲ್, ರಾಜಕುಮಾರ ಚಿದ್ರೆ, ರಾಜಕುಮಾರ ಎಡವೆ, ಮಹ್ಮದ್ ಸಮೀ, ಸೂರ್ಯಕಾಂತ ಸ್ವಾಮಿ ಸೇರಿದಂತೆ ಅನೇಕರಿದ್ದರು.
ಸತ್ಕಾರ : ಈ ವೇಳೆ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಅಣದೂರೆ, ಕಿರಿಯ ಆರೋಗ್ಯ ನಿರೀಕ್ಷಕ ಮಹ್ಮದ್ ಸಮೀ, ಪೌರಕಾರ್ಮಿಕರಾದ ಶೋಬಾವತಿ, ಜೈಶ್ರೀ, ಸಂತೋಷಿ, ಪ್ರಭಾವತಿ, ಲಕ್ಷ್ಮೀ ಬಾಬುರಾವ, ಮೊಗಲಮ್ಮ, ಶಿವಮ್ಮ, ಲಕ್ಷ್ಮೀ ಮಲ್ಲಿಕಾರ್ಜುನ ಅವರಿಗೆ ಸತ್ಕರಿಸಲಾಯಿತು.
ಪೌರ ಕಾರ್ಮಿಕರ ಸನ್ಮಾನಕ್ಕೆ ಹರ್ಷ
ಐತಿಹಾಸಿಕ ಉದ್ಭವಲಿಂಗ ಶ್ರಿ ಅಮರೇಶ್ವರ ಜಾತ್ರಾ ನಿಮಿತ್ತ ಸತತ ಒಂದು ವಾರಗಳ ಕಾಲ ಪಟ್ಟಣದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಜಾತ್ರಾ ಯಶಸ್ವಿಯಾಗಿ ನಡೆಯಲು ಕೈ ಜೋಡಿಸಿರುವ ಪೌರ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ. ಇದರಿಂದ ಪೌರ ಕಾರ್ಮಿಕರಿಗೆ ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡಲಿದೆ.
ದತ್ತಾತ್ರೇಯ ಹವರಗೆ
ಜಿಲ್ಲಾ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ