ಮಾದಕ ವಸ್ತುಗಳ ದುಷ್ಪರಿಣಾಮ ಜಾಗೃತಿ ಕುರಿತ ಪಾರಂಪರಿಕ ಓಟ
ಬೀದರ್:ಮಾ.11: ಕರ್ನಾಟಕ ಪೋಲಿಸ್ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಜಾಗೃತಿ ಕಾರ್ಯಕ್ರಮ ನಿಮಿತ್ಯ ನಗರದ ಬೀದರ್ ಕೋಟೆ ಅವರನದ ಮುಂಭಾಗದಿಂದ ಸಿದ್ರಾರ್ಥ ಕಾಲೇಜು ಮುಂದುಗಡೆಯಿಂದ ಹಾದು, ಅಂಬೇಡ್ಕರ್ ವೃತ್ತದ ಮೂಲಕ ಬರೀದ್ ಶಾಹಿ ಉದ್ಯಾನವನದ ವರೆಗೆ ಪಾರಂಪರಿಕ ಓಟ ಎರ್ಪಡಿಸಲಾಗಿತ್ತು.
ಬೀದರ್ ಕೋಟೆ ಅವರಣದ ಮುಂಭಾಗ ಸುಮಾರು 1200 ಜನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳ ಜಾಗೃತಿ ಓಟಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಸಿರು ನಿಶಾನೆ ತೋರಿದರು.
ಪಾರಂಪರಿಕ ಓಟವು ಕೋಟೆ ಮುಂಭಾಗದಿಂದ ಹಾದು, ಸಿದ್ದಾರ್ಥ ಕಾಲೇಜು, ಅಂಬೇಡ್ಕರ್ ವೃತ್ತ, ಶಿವಾಜಿ ಚೌಕ್, ಹರಳಯ್ಯ ಸರ್ಕಲ್, ಮೋಹನ್ ಮಾರ್ಕೆಟ್ ಮುಂಭಾಗದಿಂದ ರೋಟ್ರಿ ಸರ್ಕಲ್, ಮಡಿವಾಲ ವೃತ್ತ, ಕೇಂದ್ರ ಬಸ್ ನಿಲ್ದಣದ ಮುಂಭಾಗದಿಂದ ಬರೀದ್ ಶಾಹಿ ಉದ್ಯಾನವನಕ್ಕೆ ತಲುಪಿತು. ನಂತರ ಶಿವನಗರ ರಿಂಗ್ ರೋಡ್‍ನ ವಾಕಿಂಗ್ ಪುಟಪಾತ್‍ದಲ್ಲಿ ಸಾರ್ವಜನಿಕ ಸರಳ ಸಮಾರಂಭವನ್ನು ಉದ್ದೇಸಿಸಿ ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಭಾರತ ಡ್ರಗ್ ಮುಕ್ತವಾಗಲು ಪೋಲಿಸ್‍ರೊಂದಿಗೆ ಕೈಜೋಡಿಸಬೇಕು, ಕಳೆದ ಒಂದು ವರ್ಷದಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಕ್ರಾಂತಿಕಾರಕ ಹೆಜ್ಜೆಯನ್ನಿರಿಸಿ ಜಿಲ್ಲೆಯನ್ನು ಡ್ರಗ್ ಮಾಫಿಯಾದಿಂದ ಮುಕ್ತ ಮಾಡಲು ಹೊರಟಿರುವುದು ಅಭಿನಂದನಾರ್ಹ ಕ್ರಮವಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ನಾರ್ಕೊಟಿಕ್ ಕ್ರೈಮ್ ತಂಡ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ಜಂಟಿಯಾಗಿ ಒಂದು ದಿನದ ಹಿಂದಷ್ಟೆ ಔರಾದ್ ತಾಲೂಕಿನ ವನಮಾರಪಳ್ಳಿ ಬಳಿ ಆಂದ್ರ ಪ್ರದೇಶದಿಂದ ಮಹಾರಾಷ್ಟ್ರದ ಕಡೆ ಹೋಗುತ್ತಿದ್ದ ಲಾರಿ ತಡೆದು ನೋಡಿದಾಗ ಅಲ್ಲಿ ಸುಮಾರು ಒಂದು ವರೆ ಕೋಟಿ ಬೆಲೆ ಬಾಳುವ ಸುಮಾರು 1,596 ಕಿಲೋ ಗ್ರಾಮ್ ಗಾಂಜಾ ವಶ ಪಡಿಸಿಕೊಳ್ಲಲಾಗಿದೆ. ಈ ಹಿಂದೆ ಇದೇ ಲಾರಿಯಲ್ಲಿ ಗಾಂಜಾ ಸಾಗಿಸಲಾಗಿತ್ತು. ಲಾರಿ ಚಾಲಕ ಸೇರಿದಂತೆ ಇತರೆ ಅಪರಾಧಿಗಳು ಫೆಬ್ರವರಿ 15ರಂದು ಜೈಲಿನಿಂದ ಬಿಡುಗಡೆಗೊಂಡಿದ್ದರು. ಅವರ ಮೇಲೆ ನಿಗಾ ಇರಿಸಿದ್ದರಿಂದ ಇಂಥ ಬೃಹತ್ತಾದ ಘಟನೆ ತಪ್ಪಿಸಿದಂತಾಯಿತು. ನೆರೆಯ ಒರಿಸ್ಸಾ ಹಾಗೂ ಆಂದ್ರದಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದ್ದು ಅದು ಕರ್ನಟಕ ಹಾಗೂ ಮಹಾರಾಷ್ಟರದಲ್ಲಿ ಸಾಗಿಸಿ ಅದನ್ನು ವಿದ್ಯಾರ್ತಿಗಳಿಗೆ ವಿತರಿಸಿ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಿಸಲು ಇಮಥ ಧಂದೆ ನಿರಂತರವಾಗಿ ನಡೆಯುತ್ತಿದ್ದು ಜಿಲ್ಲಾ ಪೋಲಿಸ್ ಇಲಖೆ ಇದುವರೆಗೆ 3096 ಕೆ.ಜಿ ಗಾಂಜಾ ವಶಪಡಿಸಿಕೊಂಡಿದೆ. ಇಮಥ ಪ್ರಕರಣಗಳನ್ನು ಭೇದಿಸಿ ಬೀದರ್ ಜಿಲ್ಲೆ ಅಷ್ಟೆ ಅಲ್ಲ ಕರ್ನಾಟಕವನ್ನು ಮಾದಕ ವಸ್ತುಗಳಿಂದ ಮುಕ್ತ ಮಾಡಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯ ಸಾರ್ವಜನಿಕರು ಇಂಥ ಪ್ರಕರಣಗಳು ಕಂಡು ಬಂದಲ್ಲಿ ಜಿಲ್ಲಾ ಪೋಲಿಸ್‍ರಿಗೆ ಮಾಹಿತಿ ನೀಡುವಂತೆ ಎಸ್.ಪಿ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಪಾರಂಪರಿಕ ಓಟದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚುವರಿ ಎಸ್.ಪಿ ಮಹೆಶ ಮೆಘಣ್ಣನವರ್, ಜಿಲ್ಲೆಯ ಇತರೆ ಹಿರಿಯ ಪೋಲಿಸ್ ಅಧಿಕಾರಿಗಳು, ಶಾಲಾ, ಕಾಲೇಜುಗಳ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾಉರ್ಯಕ್ರಮದಲ್ಲಿದ್ದರು.