ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಕುಕನೂರು, ಮಾ.11: ಪಟ್ಟಣದ ಸಂಜಯ ನಗರದಲ್ಲಿ ಶನಿವಾರ ಮಹಿಳಾ ದಿನಾಚರಣೆ  ಹಾಗೂ ವಿವಿಧ ಸಾಧಕರಿಗೆ ಸನ್ಮಾನ  ಜರಗಿತು.     ಮುಖ್ಯ ಅತಿಥಿ ಯಾಗಿ   ಭಾಗವಹಿಸಿದ್ದ    ಜಿಲ್ಲಾ ಉತ್ತಮ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಕ್ಷಕರಾದ ಗಿರಿಜಾ ಧರ್ಮಾಸಾಗರ್ ಮಾತನಾಡಿ, ದೇಶದಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರ ಹಕ್ಕುಗಳಿಗಾಗಿ  ರಾಷ್ಟ್ರದ ಅನೇಕ ಮಹನೀಯರು ಅವಕಾಶ ನೀಡಿದ ಪರಿಣಾಮ ಇಂದು ಎಲ್ಲ ಕ್ಷೇತ್ರದ ಮಹಿಳೆಯರು ಮುಂದೆ ಬರಲು ಸಾಧ್ಯವಾಗಿದೆ,   ಮಹಿಳಾ ದಿನ ಸಂದರ್ಭದಲ್ಲಿ ಮಹಿಳೆಯರು ಮುಂದೆ ಬಂದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.     ಶಶಿಕಲಾ ಮಂಗಳೂರು ಮಾತನಾಡಿ, ಮಹಿಳೆಯರು ಸಬಲೀಕರಣ ಜೊತೆಗೆ  ಉತ್ತಮ ಸಂಸ್ಕಾರದಿಂದ ಮಕ್ಕಳನ್ನು ನಾಡಿನ ಹೆಮ್ಮೆಯ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಂಘಟನೆ ಅಭಿವೃದ್ದಿ ಪಡಿಸುವುದು ಅಗತ್ಯವಿದೆ, ಸಾಕಷ್ಟು ಮಹಿಳಾ ಸಾಧಕಿಯರ ತ್ಯಾಗ ಮಯ ಜೀವನ ವನ್ನು ಅಥ೯ ಮಾಡಿಕೊಂಡು ಇಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುವ ಅವಕಾಶ ದೊರಕಿದ್ದು ನಮ್ಮ ಸೌಭಾಗ್ಯ ಎನ್ನಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಇಂಥ ಕಾಯ೯ಕ್ರಮ ಒತ್ತಡದಲ್ಲಿರುವ ಮನಸ್ಸುಗಳಿಗೆ ಮನೋರಂಜನೆ ನೀಡುವ ಕ್ಲಿನಿಕ್  ಇದ್ದಂತೆ ಎಂದು ತಿಳಿಸಿದರು.  
ಈ ಸಂದರ್ಭದಲ್ಲಿ  ಹಿರಿಯರಾದ ಯಲ್ಲಮ್ಮ ಮಂಗಳೂರು, ಲಕ್ಷ್ಮಿ ಸಬರದ, ಡಾಕ್ಟರ್. ಮಮತಾ, ಡಾ. ಅಶ್ವಿನಿ, ಡಾಕ್ಟರ್ ಅಂಗಡಿ ಶಕುಂತಲಾ, ಮಾಧವಿ ನಾಡಗೌದ್ರ,,  ಮಹಾದೇವಿ ಕಂಬಳಿ,  ವಿಜಯ ಲಕ್ಷ್ಮಿ ವಕ್ಕಲದ, ಶ್ರೀಮತಿ ಕಲಾಲ್ ಸೇರಿದಂತೆ  ಅನೇಕರು ಹಾಜರಿದ್ದರು.   ನಂತರ ಸಾಂಸ್ಕೃತಿಕ ಕಾರ್ಯಕ್ರಮ , ವೇಷ ಭೂಷಣ ಸ್ಪರ್ದೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿದವು.
One attachment • Scanned by Gmail