ಕ್ರಿಯಾ ಚಿಂತಕ ಪ್ರಶಸ್ತಿಗೆ ಹೊಳೆಪ್ಪನವರ ಆಯ್ಕೆ
ಅಥಣಿ:ಮಾ.11: ಪಟ್ಟಣದ ನಿವೃತ್ತಿ ಆರೋಗ್ಯ ಅಧಿಕಾರಿ, ಯೋಗ ಶಿಕ್ಷಕ ಹಾಗೂ ಹಿರಿಯ ಸಾಹಿತಿ ಎಸ್ ಕೆ ಹೊಳೆಪ್ಪನವರ ಕಲಬುರ್ಗಿಯ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕೊಡಮಾಡುವ 2024ನೇ ಸಾಲಿನ ಕ್ರಿಯಾ ಚಿಂತಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಯೋಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದೇ ಮಾರ್ಚ್ 17ರಂದು ಯಾದಗಿರಿಯಲ್ಲಿ ಜರಗುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಗೆ ಭಾಜನರಾಗಿರುವ ಎಸ್ ಕೆ ಹೊಳಪ್ನವರ ಅವರಿಗೆ ಅಥಣಿ ಸಾಹಿತಿಗಳು, ಪತಂಜಲಿ ಯೋಗ ಪೀಠದ ಸದಸ್ಯರು, ಹಾಗೂ ಅಭಿಮಾನಿಗಳು ಅಭಿನಂದಿಸಿದ್ದಾರೆ.