ಲೋಕಸಭಾಚುನಾವಣೆಗೆ ಅಬ್ಬರ, ಬೊಬ್ಬೆ, ಕೂಗುಗಳ ಮದ್ಯೆ ಗ್ಯಾರಂಟಿಗಳ ಸದ್ದು: ಸುಧೀರ್ ಮುರೊಳ್ಳಿ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಮಾ.11; ರಾಜ್ಯದ ಲೋಕಸಭೆ ಚುನಾವಣೆಯಲ್ಲಿ ಘೋಷಣೆ, ಅಬ್ಬರ, ಬೊಬ್ಬೆ, ಕೂಗುಗಳ ಮಧ್ಯೆ ಕಾಂಗ್ರೆಸ್ ಗ್ಯಾರಂಟಿಗಳು ಸದ್ದು ಮಾಡುತ್ತಿವೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ ಮುರೊಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 10 ವರ್ಷದ ಮೋದಿಯವರ ಆಡಳಿತ ಜನರಿಗೆ ಏನು ಕೊಟ್ಟಿದೆ ಎಂಬುವುದರ ಬಗ್ಗೆ ಉತ್ತರ ಇಲ್ಲ, 400 ರಿಂದ 1200 ರೂವರೆಗೆ ಗ್ಯಾಸ್ ಸಿಲೆಂಡರ್ ಬೆಲೆ ಏರಿಕೆಯಾಗಿತ್ತು, ಇದೀಗ 200 ರೂ. ಕಡಿಮೆ ಮಾಡಿದ್ದಾರೆ ಎಂದು ಟೀಕಿಸಿದ ಅವರು ಚುನವಣಾ ಬಾಂಡ್‍ಯಿಂದ ಎಷ್ಟು ಹಣ ಬಂದಿದೆ ಎಂದು ತೊರಿಸುವ ಎದೆಗಾರಿಕೆ ಮೋದಿಯವರಿಗಿಲ್ಲ, ಎಸ್‍ಬಿಐ ಮೇಲೆ ಒತ್ತಡ ಹೇರಿ ಚುನಾವಣಾ ಬಾಂಡ್ ಬಹಿರಂಗ ವಾಗದಂತೆ ನೋಡಿಕೊಂಡಿದ್ದಾರೆಂದು ಆರೋಪಿಸಿದರು.
ಬೆಳೆಗೆ ಬೆಂಬಲ ಬೆಲೆ ಕೇಳಲು ಪ್ರತಿಭಟನೆಗಾಗಿ ದೆಹಲಿ ಚಲೋ ಹಮ್ಮಿಕೊಂಡ ರೈತರು ಬರುವ ದಾರಿಯಲ್ಲಿ ಮಳಿ ಬಡಿದು ಕೇಂದ್ರ ಸರ್ಕಾರ ಹೀನಾಯವಾಗಿ ರೈತರ ಮೇಲೆ ದೌರ್ಜನ್ಯ ಎಸಗಿದೆ ಎಂದ ಅವರು 400 ಸೀಟು ಬಂದರೆ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ ಸಂಸದ ಅನಂತಕುಮಾರ ಹೆಗಡೆಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗರು ಸಂವಿಧಾನ ವಿರೋಧಿಗಳು ಎಂದು ಟೀಕಿಸಿದರು.
ಈ ಹಿಂದೆ ಮನಮೋಹನ್‍ಸಿಂಗ್ ಪ್ರಧಾನಿಯಾಗಿದ್ದಾಗ 100ಕ್ಕೂ ಹೆಚ್ಚು ಸುದ್ದಿಗೋಷ್ಠಿ ನಡೆಸಿದ್ದರು ಮೋದಿಯವರು ಕಳೆದ 10 ವರ್ಷದಲ್ಲಿ ಒಂದು ಸುದ್ದಿಗೋಷ್ಠಿ ನಡೆಸದೇ ಪತ್ರಕರ್ತರನ್ನು ಎದುರಿಸುವ ಮನಸ್ಥಿತಿ ಇವರಿಗಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಲ್ಬುರ್ಗಿ ಕಾಂಗ್ರೆಸ್ ಮುಖಂಡ ಶೌಕತ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಚಿಗಟೇರಿ ಬ್ಲಾಕ್ ಅಧ್ಯಕ್ಷ ಕೆ.ಕುಬೇರಪ್ಪ, ಮಹಿಳಾ ಬ್ಲಾಕ್ ಅಧ್ಯಕ್ಷೆ ಜಯಲಕ್ಷ್ಮಿ, ಪುರಸಭೆ ಸದಸ್ಯರಾದ ಟಿ.ವೆಂಕಟೇಶ್, ಲಾಟಿ ದಾದಾಪೀರ, ಉದ್ದಾರ ಗಣೇಶ್, ಇಸ್ಮಾಯಿಲ ಎಲಿಗಾರ, ಹೆಚ್.ಚಂದ್ರಪ್ಪ, ಮೈದೂರು ರಾಮಪ್ಪ ಹೆಚ್.ಟಿ.ವನಜಾಕ್ಷಿ ಶಿವಯೋಗಿ, ಉಮಾಶಂಕರ, ನೇತ್ರಾವತಿ, ಸುಮಾ ಜಗದೀಶ, ಕವಿತಾ ಸುರೇಶ್, ಎಲ್.ಮಂಜ್ಯನಾಯ್ಕ, ಖುರ್ಷಿದ್, ಮಜೀದ್, ಇಟ್ಟಿಗುಡಿ ರಮೇಶ್, ಎನ್.ಶಂಕರ್, ಮತ್ತೂರು ನಿಂಗರಾಜ, ಮತ್ತಿತರರು ಇದ್ದರು.
11ಎಚ್‍ಆರ್‍ಪಿ1; ಹರಪನಹಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುಧೀರಕುಮಾರ ಮುರೋಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.