ಸಮೃದ್ಧ ಸಮಾಜ ನಿರ್ಮಾಣ ಮಹಿಳೆಯರಿಂದ ಸಾಧ್ಯ : ಕಾಂತಾ ನಾಯಕ
ವಿಜಯಪುರ,ಮಾ.11:ಸರ್ವ ಕ್ಷೇತ್ರದಲ್ಲೂ ಸಮಾನ ಅವಕಾಶ ಪಡೆದು ಸಮೃದ್ಧ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಸರ್ವ ಶ್ರೇಷ್ಠವಾಗಿದೆ ಮತ್ತು ಸ್ವಾವಲಂಬನೆಯ ಕನಸಿನೊಂದಿಗೆ ಬದುಕುವ ಛಲ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.
ನಗರದ ಬಂಜಾರಾ ಶ್ರೀ ಸೇವಾಲಾಲ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯ ಮತ್ತು ಬಂಜಾರಾ ಗೋರಬಾಯಿ ಟೋಳಿ ಸಮೂಹ ಸಂಸ್ಥೆಯ ಉದ್ಘಾಟನಾ, ಸನ್ಮಾನ ಕಾರ್ಯಕ್ರಮ ಮತ್ತು ಮಹಿಳೆಯರ ಫ್ಯಾಷನ್ ಶೋ ಪ್ರದರ್ಶನ ಉದ್ಘಾಟನೆ ಮಾಡಿ ಮಾತನಾಡಿದರು.
ಮುಂದುವರೆದ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿಯೂ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಉನ್ನತ ಸ್ಥಾನ ಮಾನ ಪಡೆದುಕೊಳ್ಳಬೇಕು. ಮಹಿಳೆಯರು ಯಾವುದೇ ಸೋಲಿಗೆ ಅಂಜದೆ ಗಟ್ಟಿಯಾಗಿ ನಿಂತು ಎದುರಿಸಿ ಗೆಲುವಿನ ದಡ ಮುಟ್ಟಬೇಕು ಎಂದವರು ಹೇಳಿದರು.
ಪಿ. ಅನುಪಮಾ ಅವರು ಭಾರತೀಯ ಸ್ತ್ರೀ ಭವ್ಯ ಪರಂಪರೆಯ ದಾರಿಗಳ ಕುರಿತು ಉಪನ್ಯಾಸ ನೀಡಿ, ಬದುಕಿನ ದಿಕ್ಕಿನಲ್ಲಿ ಸಾಗುವಾಗ ಹತ್ತು ಹಲವಾರು ಸವಾಲುಗಳು ಬರುತ್ತವೆ ಮತ್ತು ಹಿಂದಿನ ಕಾಲದಿಂದಲೂ ತನ್ನದೇಯಾದ ಪೂಜ್ಯ ಗೌರವ ಭಾವನೆ ಮಹಿಳೆಗೆ ಕೊಡಮಾಡಿದೆ ಮತ್ತು ಚರಿತ್ರೆಯಲ್ಲೂ ಮಹಿಳೆಯೂ ವಿವಿಧ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ ಎಂದವರು ಹೇಳಿದರು.
ಮುಖ್ಯ ಅಥಿತಿಯಾಗಿ ಕರ್ನಾಟಕ ಸರ್ಕಾರದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸಂತೋಷಕುಮಾರ ನಿಗಡಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಇಂದು ಪ್ರತಿ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆ ಶ್ರಮ ಜ್ಞಾನದ ಬಲದಿಂದ ಉನ್ನತ ಶ್ರೇಣಿಯಲ್ಲಿ ಕಾಣುತಿದ್ದಾರೆ. ಇನ್ನು ನಮ್ಮ ವ್ಯವಸ್ಥೆಯು ಇನ್ನಷ್ಟು ಮಹಿಳಾ ಸಮಾಜವನ್ನು ಬೆಂಬಲಿಸಿ ಸ್ಫೂರ್ತಿ ತುಂಬಬೇಕಾಗಿದೆ ಮತ್ತು ಮಾನವೀಯತೆಯ ಮಮಕಾರ ನೀಡಬೇಕಾಗಿದೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ನೂತನ ಸಂಸ್ಥೆಯ ಅಧ್ಯಕ್ಷೆ ಮತ್ತು ಹಿರಿಯ ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ಸಮಾನ ಮನಸ್ಕರು ಕೂಡಿಕೊಂಡು ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಮತ್ತು ಸಾಧಕರ ಚಿಂತೆನೆ ಮತ್ತು ಸಾಮಾಜಿಕ ಸುಧಾರಣೆಗೆ ಈ ವೇದಿಕೆ ಸಿದ್ದವಾಗಿದೆ ಎಂದರು.
ವೇದಿಕಯ ಅಧ್ಯಕ್ಷತೆ ವಹಿಸಿದ ಸುನೀತಾ ನಾರಾಯಣ ಪ್ರಸಾದ ದುಬೆ ಮಾತನಾಡಿ, ಪ್ರತಿಯೊಬ್ಬರೂ ಒಂದು ಸಂಕಲ್ಪ ಈಡೇರಬೇಕಾದರೆ ಸಹಾಯ ಸಹಕಾರ ಮುಖ್ಯ. ಮಹಿಳೆಯರು ತಮ್ಮ ಶಕ್ತಿ ಯುಕ್ತಿಯಿಂದ ಮುಂದೆ ಸಾಗಬೇಕಾಗಿದೆ ಎಂದವರು ಹೇಳಿದರು.
ವೇದಿಕೆಯ ಮೇಲೆ ಶಾರದಾ ನಾಯಕ, ವಿಶಾಲಾಕ್ಷಿ ಅರವಿಂದ ಸಿಂದಗಿ, ಶಾಂತಾ ಪಾಟೀಲ, ಸುಧಾ ಬಿಜ್ಜರಗಿ, ಶಾರದಾ ಲಮಾಣಿ, ರುಕ್ಮಿಣಿ ಜೆ. ಚವ್ಹಾಣ, ಬಿ.ಡಿ. ಚವ್ಹಾಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಫ್ಯಾಷನ್ ಶೋ ಸ್ಪರ್ಧಿಗಳಿಗೆ ಸನ್ಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗೀತಾ ಪವಾರ, ನಿಶಾ ಚವ್ಹಾಣ, ಪ್ರೇಮ ಪವಾರ, ಪವಿತ್ರ ಪವಾರ, ಜ್ಯೋತಿ ಲಮಾಣಿ, ಗೀತಾ ಚವ್ಹಾಣ
ಮತ್ತು ವೆಂಕೋಬ ದಾಸರ ಮುಂತಾದವರು ಹಾಜರಿದ್ದರು.
ಡಾ. ಯಲ್ಲಮ್ಮ ಸ್ವಾಗತಿಸಿದರು. ಸುರೇಖಾ ರಾಠೋಡ ನಿರೂಪಿಸಿದರು. ಜಯಶ್ರೀ ನಾಯಕ ವಂದಿಸಿದರು.