ಸೌರಾಷ್ಟ್ರ ಶಾಲೆಗೆ ಲಲಿತಾ ಅನಪೂರ ಭೇಟಿ
ಗುರುಮಠಕಲ್ :ಮಾ.11: ತಾಲೂಕಿನ ಸೌರಾಷ್ಟ ಹಳ್ಳಿ ಶಾಲೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಕು.ಲಲಿತಾ ಅನಪೂರ ಭೇಟಿ ನೀಡಿದರು.
ಶಾಲೆಯ ಮೂಲಸೌಕರ್ಯಗಳ ಪರಿಶೀಲನೆ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಕ್ರಮಕೈಗೊಳ್ಳುವಂತೆ ಅಲ್ಲಿನ ಶಿಕ್ಷಕರಿಗೆ ಹಾಗೂ ಮುಖ್ಯಗುರುಗಳಿಗೆ ಸೂಚಿಸಿದ ಅವರು, ಮಧ್ಯಾಹ್ನದ ಬಿಸಿಯೂಟ ಮಕ್ಕಳೊಂದಿಗೆ ಸೇವಿಸಿದರು.
ಬಿಸಿಯೂಟ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಶೈಕ್ಷಣಿಕ ಅಭಿವೃದ್ಧಿಗಾಗಿ ಜಾರಿಗೆ ತಂದಿವೆ. ಇದರ ಸದುಪಯೋಗವಾಗಲಿ. ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮಣ್ಣ ಮಡಿವಾಳ, ಮರಲಿಂಗ ಜಿಂಕೇರಿ, ಹನುಮಂತ್ ಮುಂಡ್ರಿಗಿ
ಶೇಖರ್ ಕಡೇಚೂರು, ಅಂಬರೇಶ್ ನಾಯಕ, ಲಕ್ಷ್ಮಣ ಓಬಳಾಪುರ ಸೇರಿದಂತೆ ಇತರರಿದ್ದರು.