ಲಾಲ್ ಬಹುದ್ದೂರ್ ಶಾಸ್ತ್ರಿ ನಗರದ ಶಾಲೆಯಲ್ಲಿಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.17: ಇಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆಯನ್ನು  ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ  ಧ್ವಜಾರೋಹಣೆ ಮಾಡಿ ಮಕ್ಕಳಿಗೆ ಸಿಹಿ ಹಂಚಿ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಜೆ ವಿ ಮಂಜುನಾಥ, ಅಂಗಡಿ ರಾಜಶೇಖರ್, ದಾಸಾಪುರ ಅರುಣ್ ಕುಮಾರ್, ಹರಿವಾಣ ಮಲ್ಲಿಕಾರ್ಜುನ, ಶಾಸ್ತ್ರಿನಗರದ ಪ್ರಕಾಶ್, ಗೋಪಿನಾಥ್, ಬಡ್ತಿ ಮುಖ್ಯ ಗುರುಗಳಾದ ಮಿಂಚೇರಿ ರಾಜಶೇಖರ್,ಹಾಗೂ ಶಾಲೆಯ ಸಿಬ್ಬಂದಿ ವರ್ಗದವರಾದ ಬಸವರಾಜ ದತ್ತೇಶ್ವರ ಇಂದಿರಾ ಛಾಯಾ ಸುಜಾತ ದುರ್ಗಮ್ಮ ಮತ್ತು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.