ವರದವಿನಾಯಕ ಕ್ರೆಡಿಟ್ ಸಹಕಾರ ಸಂಘದಸದಸ್ಯರಿಗೆ ಶೇ.19 ಲಾಭಾಂಶ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.17: ನಗರದ  ವರದವಿನಾಯಕ ಕ್ರೆಡಿಟ್ ಸಹಕಾರ ಸಂಘದ ಸರ್ವ ಸದಸ್ಯರ 13 ಸಾಮಾನ್ಯ ಸಭೆ ನಿನ್ನೆ ಪಾರ್ವತಿ ನಗರದ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಜೆ.ಎಸ್. ನೇಪಾಕ್ಷಪ್ಪ ಅಧ್ಯಕ್ಷತೆವಹಿಸಿದ್ದರು.  ಸಂಘದ ಸಂಸ್ಥಾಪಕ ಎನ್. ಅಯ್ಯಪ್ಪ ಇವರು ಸಭೆಯನ್ನು ಉದ್ಘಾಟನೆ ಮಾಡಿದರು.
ಸಭೆಯಲ್ಲಿ ಅಧ್ಯಕ್ಷರು ಕಳೆದ ಸಾಲಿನ ವರದಿಯನ್ನು ಮಂಡಿಸಿ ಮಾತನಾಡುತ್ತಾ, 2023-24 ನೇ ಸಾಲಿನಲ್ಲಿ ಸಂಘವು 75,18,215  ರೂ.ನಿವ್ವಳ ಲಾಭ ಗಳಿಸಿದ್ದು. ಸಂಘದ ಸದಸ್ಯರಿಗೆ ಶೇಕಡ 19 ರಂತೆ ಲಾಭಾಂಶ ನೀಡುವುದಾಗಿ ಘೋಷಣೆ ಮಾಡಿದರು.
ಸಂಘದ ಅಂದಾಜು ಮುಂಗಡ ವಹಿವಾಟು ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ವಿ.ಭಾಸ್ಕರ್ ರಾವ್, ನಿರ್ದೇಶಕರುಗಳಾದ  ಉಡೇದ ಬಸವರಾಜ,  ವಿ. ಆಂಜಿನೇಯಲು, ಹೆಚ್.ಬಾಳನಗೌಡ,  ಕೆ. ಮಲ್ಲಿಕಾರ್ಜುನ ಗೌಡ,  ಸುರೇಖಾಪಾಟೀಲ್, ಹೆಚ್.ಸುಮಾರಾಣಿತಿ ಪುಷ್ಪಾವತಿ,  ಎನ್. ಆರ್. ಜ್ಯೋತಿ, ಕಾಸೀಂಸಾಬ್,  ಬಿ.ಈರಪ್ಪ, ಕೆ. ದೊಡ್ಡ ಮಹೇಶ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಪ್ರಭು ಹಾಗೂ ಸಂಘದ ಸಿಬ್ಬಂದಿ ಪಾಲ್ಗೊಂಡಿದ್ದರು. ಸಭೆಯ ನಿರೂಪಣೆ ಹೆಚ್. ಈಶ್ವರಗೌಡ ಮತ್ತು ವಂದನಾರ್ಪಣೆಯನ್ನು  ಬಿ. ತಿಮ್ಮನಗೌಡ ಪಾಟೀಲ್‌ ಮಾಡಿದರು.