ಸಾಧಕರಿಗೆ, ಪ್ರತಿಭಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.17: ಕಲಾ ದಿಗ್ಗಜರ ಹೆಸರಿನಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದಂತ ಸಾಧಕರಿಗೆ, ಉತ್ತಮ ಶಿಕ್ಷಕರಿಗೆ ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬಳ್ಳಾರಿ ಆಕ್ಟಿವಿಟೀಸ್ ಅಸೋಸಿಯೇಷನ್ ಸಂಸ್ಥೆಯ 52ನೇ ವಾರ್ಷಿಕೋತ್ಸವ ಅಂಗವಾಗಿ ನಗರದ  ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ ಶರಣ ಸಭಾಂಗಣದಲ್ಲಿ ನಿನ್ನೆ  ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಲೆಕ್ಕ ಪರಿಶೋಧಕ ಎಸ್ ಪನ್ನಾರಾಜ್ ಕಾರ್ಯಕ್ರಮ ಉದ್ಘಾಟಿಸಿ “ಕಲೆ, ಕಲಾವಿದ, ಸಾಹಿತಿ, ವಿದ್ಯಾರ್ಥಿ ಯಾರೇ ಆಗಲಿ ಪ್ರೋತ್ಸಾಹ, ಸನ್ಮಾನ ಸಿಕ್ಕಾಗ ಹೆಮ್ಮರವಾಗಿ ಬೆಳೆಯಲು ಸಾಧ್ಯ” ಎಂದು ಉದ್ಘಾಟನೆ ನುಡಿಗಳಲ್ಲಿ ತಿಳಿಸಿದರು.
ಬಿಪಿಎಸ್ ಸಿ ಶಾಲೆಯ ಅಧ್ಯಕ್ಷರಾದ ಡಾ. ಎಸ್ ಜೆ ವಿ ಮಹಿಪಾಲ್, ಹಿರಿಯ ನ್ಯಾಯವಾದಿಗಳು ಜನಾರ್ಧನ್,  ಕನ್ನಡ ಸಾಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ನಾಗರಾಜ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಪರಮಪೂಜ್ಯ ಕಲ್ಯಾಣ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಖ್ಯಾತ ರಂಗಭೂಮಿ ಕಲಾವಿದರಾದ ಬಳ್ಳಾರಿ ರಾಘವ ಅವರ ಮೊಮ್ಮಗ ಎ ರಘುರಾಮ್, ಬೆಂಗಳೂರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷತೆ ಅನಿಸಿತು.
ಅಂಚೆ ಚೀಟಿ ಮತ್ತು ಹಳೆ ನಾಣ್ಯಗಳ ಪ್ರದರ್ಶನವು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶವಂತ ರಾಜ್ ಉಪಾಧ್ಯಕ್ಷರಾದ ಪಿ.ಗಾದೆಪ್ಪ ಸಹ ಕಾರ್ಯದರ್ಶಿ ವಿ.ರಾಮಚಂದ್ರ ಉಪಸ್ಥಿತರಿದ್ದರು.
ಸಂಧ್ಯಾ ಕೋಲಾಚಲಂ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯ ಅವರು ಸ್ವಾಗತಿಸಿದರು. ಡಾ. ಎ ಎನ್ ಸಿದ್ದೇಶ್ವರಿ, ಡಾ. ಶ್ರೀನಿವಾಸ ರೆಡ್ಡಿ ಅವರು ನಿರೂಪಣೆ ಮಾಡಿದರು. ಡಾ. ಟಿ.ಎಂ. ಮಲ್ಲೇಶ್ ವಂದನಾರ್ಪಣೆ ಮಾಡಿದರು