ಮಾನವ ಸರಪಳಿ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು,ಸೆ17: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತ ದೇಶದ ಪ್ರಜಾಪ್ರಭುತ್ವ ಸಂವಿಧಾನ ಮಹತ್ವವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ 4ರ ಹತ್ತಿರದ ಶಿವಾ ಪೇಟ್ರೋಲ್ ಪಂಪದಿಂದ ಕಿತ್ತೂರು, ಎಂ.ಕೆ.ಹುಬ್ಬಳ್ಳಿ ಮಾರ್ಗವಾಗಿ ಮುತ್ನಾಳವರೆಗೆ 25 ಕಿ.ಮೀ. ಉದ್ದದ ಬೃಹತ್ ಮಾನವ ಸರಪಳಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಅರಣ್ಯ ಇಲಾಖೆಯವರು ಸುಮಾರು 500 ಸಸಿಗಳನ್ನು ನೆಟ್ಟರು.
ಈ ವೇಳೆ ತಹಶೀಲ್ದಾರ ರವೀಂದ್ರ ಹಾದಿಮನಿ, ತಾಪಂ ಇಓ ಕಿರಣ ಗೋರ್ಪಡೆ, ಬಿಇಓ ಚನ್ನಬಸಪ್ಪ ತುಬಾಕದ, ಕೆಪಿಸಿಸಿ ಸದಸ್ಯೆ ರೋಹಿನಿ ಪಾಟೀಲ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಪಿಡಬ್ಲೂಡಿ ಎಇಇ ಸಂಜೀವ ಮಿರಜಕರ, ಮಾಜಿ ಜಿಪಂ ಸದಸ್ಯ ಶಂಕರ ಹೊಳಿ, ಅಶಪಾಕ್ ಹವಾಲ್ದಾರ, ಅನೀಲ್ ಎಮ್ಮಿ, ಸುನೀಲ್ ಘೀವಾರಿ, ಚಂದ್ರಗೌಡ ಪಾಟೀಲ, ಮಹೇಶ ಶೆಟ್ಟರ, ಕೃಷ್ಣಾ ಬಾಳೇಕುಂದರಗಿ, ಅಪಾಶ ಹವಾಲ್ದಾರ, ಅಶೋಕ ಮಾಳಗಿ, ಪ್ರವೀಣ ಜಕ್ಕನಗೌಡರ, ಪ್ರವೀಣ ಅಡಬಿಟ್ಟಿ, ಉದಯ ಇಂಗಳೆ, ಬಸವರಾಜ ಸಂಗೋಳ್ಳಿ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‍ಐ ಪ್ರವೀಣ ಗಂಗೋಳ, ಅಪರಾಧ ವಿಭಾಗ ಪಿಎಸ್‍ಐ ಪ್ರವೀಣ ಕೋಟಿ, ಪಪಂ ಸರ್ವ ಸದಸ್ಯರು, ಉಪಸ್ಥಿತರಿದ್ದರು.