ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಗದಗ, ಸೆ17: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶಿರಹಟ್ಟಿ ತಾಲೂಕಿನ ಚಿಕ್ಕಸವಣೂರಿನ ಸರಹದ್ದಿನಿಂದ ಚಿಕ್ಕಸವಣೂರ, ಬೆಳ್ಳಟ್ಟಿ, ಸುಗ್ನಳ್ಳಿ, ಬನ್ನಿಕೊಪ್ಪ ಗ್ರಾಮ ಹಾಗೂ ಬನ್ನಿಕೊಪ್ಪ ಸರಹದ್ದಿನವರೆಗೆ ಸುಮಾರು 17 ಕೀಮಿ ಮಾನವ ಸರಪಳಿ ರಚನೆ ಮಾಡಿ ನಾಡಗೀತೆಯನ್ನು ಹಾಡಿ, ನಂತರ ಸಂವಿಧಾನ ಪ್ರಸ್ತಾವನೆಯನ್ನು ಓದಿ, ಕೈಗಳನ್ನು ಮೇಲೆತ್ತಿ ಜೈ ಹಿಂದ, ಜೈ ಕರ್ನಾಟಕ ಎಂಬ ಘೋಷಣೆ ಕೂಗುತ್ತಾ ಸರಪಳಿಯನ್ನು ಕಳಚುವುದರ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು | ಜಿಲ್ಲಾ ಮಟ್ಟದ ಅಧಿಕಾರಿಗಳು / ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು / ಸಿಬ್ಬಂದಿಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಎಲ್ಲಾ ಗ್ರಾಮಗಳ ಶಾಲೆಯ ಎಸ್.ಡಿಎಮ್.ಸಿ ಅಧ್ಯಕ್ಷರು, ಸರ್ವಸದಸ್ಯರು, ಎಸ್.ಕೆ.ಡಿಆರ್.ಡಿ.ಪಿ ಸರ್ವಸದಸ್ಯರು, ಎನ್‍ಆರ್‍ಎಲ್‍ಎಮ್ ಸದಸ್ಯರು, ವಿವಿಧ ಸಂಘ-ಸಂಘಟನೆಗಳು, ಎಲ್ಲಾ ಶಾಲಾ/ಕಾಲೇಜು ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು |ಆಶಾ ಕಾರ್ಯಕರ್ತೆಯರು, ಮಾಜಿಯೋಧರು, ಮಾಧ್ಯಮದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.