ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಬಾಗಲಕೋಟ, ಸೆ.17: ಶ್ರೀ ಗುರುದೇವ ಆತ್ಮಾನಂದ ಮಾಧ್ಯಮಿಕ ಶಾಲೆ ರೆಡ್ಡೇರ ತಿಮ್ಮಾಪೂರ 2003ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಪುನರ್‍ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಕರಾಗಿ ಸಿಂಡಿಕೇಟ ಬ್ಯಾಂಕಿನ ನಿವೃತ್ತ ಮ್ಯಾನೇಜರ ಭೀಮನಗೌಡ ಸಂಕಪ್ಪನವರ ಅವರು ಮಾತನಾಡುತ್ತ ಸುಮಾರು 21 ವರ್ಷದ ವಿದ್ಯಾರ್ಥಿ ಜೀವನ ನೆನಪುಗಳು ಮತ್ತು ಶಾಲಾ ಗುರುಗಳ ಗುರುವಂದನೆ ಉತ್ತಮ ಕೆಲಸವೆಂದು ಹೇಳಿದರು.
ಇದೇ ವೇದಿಕೆಯಲ್ಲಿ ಶ್ರೀಮತಿ ಕಾಶವ್ವತಾಯಿ ವಿದ್ಯಾಸಿರಿ ಸೇವಾ ಸಂಸ್ಥೆ (ರಿ) ವಿದ್ಯಾಗಿರಿ ಬಾಗಲಕೋಟೆ ಇವರು ಕೊಡಮಾಡುವ ವಿದ್ಯಾಸಿರಿ ಸಹಾಯಧನದ ಚೆಕ್ಕನ್ನು ನಾಲ್ಕು ಜಿಲ್ಲೆಗಳ ಬಡ ಪ್ರತಿಭಾವಂತ 8 ವಿದ್ಯಾರ್ಥಿಗಳಿಗೆ ಒಟ್ಟು ರೂ. 46,511.00 ಸಹಾಯ ಧನವನ್ನು ಸಮರ್ಥ ಶಿವಾನಂದ ಮಹಾಸ್ವಾಮಿಗಳು ಸಂಸ್ಥೆಯ ಅಧ್ಯಕ್ಷರಾದ ಭೀಮನಗೌಡ ಸಂಕಪ್ಪನವರ, ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಬಿ.ಎಮ್. ಭಂತಿ ಹಾಗೂ ಟಿ.ಬಿ. ಕೆಂಚಣ್ಣವರ ಗುರುಗಳು, ಡಾ. ವೆಂಕಪ್ಪ ಕೋವಳ್ಳಿ, ಹಾಗೂ ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ವಿತರಿಸಲಾಯಿತು.