ಲೋಕ ಅದಾಲತ್ : ಒಂದಾದ ದಂಪತಿಗಳು
ಸಂಜೆವಾಣಿ ವಾರ್ತೆ
ಔರಾದ್ :ಸೆ.೧೭: ಶನಿವಾರ ಆಯೋಜಿಸಲಾದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಕುಮಾರ ಮತ್ತು ಪ್ರಿಯಂಕಾ ಯುವ ದಂಪತಿಗಳು ಪರಸ್ಪರ ಹಾರ ಹಾಕಿಕೊಂಡು ಒಂದಾದರು.
೨೦೦೯ರಲ್ಲಿ ಮದುವೆಯಾದ ದಂಪತಿಗಳು ಸುಮಾರು ೧೦ ವಷರ್ಗಳ ಕಾಲ ಸಂಸಾರಿಕ ಜೀವನ ಮಾಡಿದರು. ಇವರಿಗೆ ೭ವರ್ಷದ ಪ್ರಶಾಂತ ಎಂಬ ಗಂಡು ಮಗು ಇದೆ.
ಇಬ್ಬರ ನಡುವೆ ಪರಸ್ಪರ ಮನಸ್ತಾಪದಿಂದ ೨೦೧೯ರಲ್ಲಿ ಬೇರೆ ಬೇರೆಯಾಗಿ, ಔರಾದ್‌ನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ೨೦೨೦ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ೫ ವರ್ಷಗಳ ಕಾಲ ದೂರವಿದ್ದ ಈ ದಂಪತಿಗಳು ಇಂದು ಲೋಕ್ ಆದಾಲತ್‌ನಲ್ಲಿ ಒಂದಾದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನಸಾಬ ಯಾದವಾಡ, ವಕೀಲರ ಸಂಘದ ಅಧ್ಯಕ್ಷ ಶ್ರೀ ಸಂದೀಪ ಮೇತ್ರೆ, ಬಾಲಾಜಿ ಕಂಬಾರ, ರವಿಕಾಂತ ನೌಬಾದೆ, ಬಾಲಾಜಿ ಉಪಾಸೆ ಉಪಸ್ಥಿತರಿದ್ದರು.
