ವಿಜೃಂಭಣೆಯಿಂದ ಜರುಗಿದ ತೋಂಟದಾರ್ಯ ಸ್ವಾಮಿ ರಥೋತ್ಸವ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ: ಮಾ.11 ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಅಮವಾಸ್ಯೆ ಪ್ರಯುಕ್ತ  ಜರುಗಿದ ಶ್ರೀ ಮನ್ನಿರಂಜನ ಜಗದ್ಗುರು ತೋಂಟದಾರ್ಯ ಸ್ವಾಮಿಯ ರಥೋತ್ಸವವು ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ  ಜರುಗಿತು.
ಬೆಳಿಗ್ಗೆ  ಸ್ವಾಮಿಗೆ  ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು  ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಜರುಗಿದವು. ಭಕ್ತರು ಹೂ ಕಾಯಿ ಹಣ್ಣು ಸಮರ್ಪಿಸಿದರು.
ಸಂಜೆ ರಥೋತ್ಸವದ ಮುನ್ನ ನಡೆದ ಪಟಾಕ್ಷಿ ಹರಾಜಿನಲ್ಲಿ ಗ್ರಾಮದ. ಗಡ್ಡಿ ಮಲ್ಲಿಕಾರ್ಜುನ ಎಂಬುವರು 26 ಸಾವಿರ ರೂಗಳಿಗೆ ಭಕ್ತಿಪೂರ್ವಕವಾಗಿ ಪಡೆದರು.
ಈ ವೇಳೆ ತೋಂಟದಾರ್ಯ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ರಥದ ಸುತ್ತ ಐದು ಸಲ ಪ್ರದಕ್ಷಣೆ ಹಾಕಿಸಲಾಯಿತು. ಬಳಿಕ ಭಕ್ತರು   ತೇರಿನ ಗಾಲಿಗಳಿಗೆ  ಈಡುಗಾಯಿ ಒಡೆಯುತ್ತಿದ್ದಂತೆ  ತೋಂಟದಾರ್ಯ ಸ್ವಾಮಿ ಬಹುಪರಾಕ್ ಎಂಬ ಜಯಘೋಷಣೆಗಳ ಮಧ್ಯೆ ಯುವಕರು ಸಡಗರ ಸಂಭ್ರಮದಿಂದ ತೇರು ಎಳೆದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮೀಜಿ, ಗದ್ದಿಕೆರೆ ಚರಂತೇಶ್ವರ  ಸ್ವಾಮೀಜಿ, ಹಬೊಹಳ್ಳಿ ಹಾಲಸಿದ್ದೇಶ್ವರ ಸ್ವಾಮೀಜಿ,ಹಂಸಾಗರ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ  ಶಿವಾಚಾರ್ಯ ಸ್ವಾಮೀಜಿ ,ಗ್ರಾಮದ ಮುಖಂಡರಾದ. ಹೆಚ್ ಬಿ.ನಾಗನಗೌಡ್ರು, ಶ್ಯಾನುಬೋಗರ ಉದಯ ಭಾಸ್ಕರ್, ಬಣಕಾರ ತೋಟಪ್ಪ, ಗೌರಜ್ಜನವರ ಬಸವರಾಜಪ್ಪ, ಅಕ್ಕಿ ತೋಟೇಶ್,  ಹೆಚ.ಬಿ.ಗಂಗಾಧರಗೌಡ,  ಪಟ್ಟಣಶೆಟ್ಟಿ ಸುರೇಶ, ಬಣಕಾರ ಕೊಟ್ರೇಶ್, ಕಡ್ಡಿ ಚನ್ನಬಸಪ್ಪ, ಹೊಟ್ಟಿ ಲೇಪಾಕ್ಷೆಪ್ಪ, ಅರುಣ್ ಕುಮಾರ್,  ಡಿಎಂ ತೋಟಯ್ಯ, ಆರ್ಚಕರಾದ. ಮಲ್ಲಯ್ಯ ಸ್ವಾಮಿ. ತಿಪ್ಪಯ್ಯಸ್ವಾಮಿ, ಟಿಎಚ್ಎಂ.ನಾಗಭೂಷಣಯ್ಯ, ಇತರರು ಇದ್ದರು.