ಮತಹಾಕಿಸುತ್ತೇವೆಂದು ಮನಿ ಕೇಳುತ್ತಾನೆ
ಎನ್.ವೀರಭದ್ರಗೌಡ
ಬಳ್ಳಾರಿ, ಮಾ.11: ನನಗೆ ಅನೇಕ ಜನ ಸದಸ್ಯರು ಗೊತ್ತು. ನಿಮ್ಮ ಪರವಾಗಿ ಅವರ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತೇನೆ. ಖರ್ಚಿಗೆ ಒಂದಿಷ್ಟು ಹಣ ನೀಡಿ ಎಂಬುವರು ಹೆಚ್ಚತೊಡಗಿದ್ದಾರೆ.
ಚುನಾವಣೆ ಅಂದ್ರೇನೆ ಹಾಗೆ ಆದಷ್ಟು ಅಭ್ಯರ್ಥಿಗಳಿಗೆ ನಿಮ್ಮ ಗೆಲುವಿಗೆ ನಾವು ಸಹಕಾರ ಮಾಡುತ್ತೇವೆ ಎಂದು ಹಣ ಕೀಳುವ ಪರಿಪಾಠ ಹೆಚ್ಚಿದೆ.
ಸಾರ್ವಜನಿಕವಾದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ಮತ ಹಾಕುತ್ತೇವೆ ಮತ್ತು ಹಾಕಿಸುತ್ತೇವೆ ಎಂದು ಹಣ ಕೇಳುವುದನ್ನು ನೋಡಿದ್ದೇವೆ‌. ಆದರೆ ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲೂ ಸದಸ್ಯರಿಗೆ ಮತ ಚಲಾಯಿಸಲು ನಿಮ್ಮ ಪರವಾಗಿ ಪ್ರಚಾರ ಮಾಡುವುದಾಗಿ ಅಭ್ಯರ್ಥಿಗಳಿಗೆ ಹಣ ಕೇಳುವ ಗಿರಾಕಿಗಳು ಹುಟ್ಟಿಕೊಂಡಿದ್ದಾರೆ.
ಬಳ್ಳಾರಿ ನಗರದಲ್ಲಿ ಈ ರೀತಿಯ ಜನರಿಲ್ಲ ಎನ್ನಬಹುದು. ಇಲ್ಲಿ ಅನೇಕರು ಯಾವುದೇ ಸ್ವಾರ್ಥ ಇಲ್ಲದೆ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತ. ಇವರು ಹೀಗೆ. ಇಂತಹವರಿಗೆ ಮತ ನೀಡಿದರೆ ಸಂಘದ ಒಳಿತಿಗೆ ಸಹಕಾರಿಯಾಗಲಿದೆ‌ ನೇರ ಮಡೆ ನುಡಿಯ ವ್ಯಕ್ತಿ, ಯಾವುದೇ ಮುಲಾಜಿಗೆ ಒಳಗಾಗದೇ ಕಾರ್ಯ ನಿರ್ವಹಿಸಿ ಸಮುದಾಯದ ಅಭಿವೃದ್ಧಿಗೂ ಸಹಕಾರಿಯಾಗಬಲ್ಲರು ಎಂದು ಹೇಳುತ್ತಿದ್ದಾರೆ.
ಆದರೆ ಹೊಸಪೇಟೆಯಲ್ಲಿನ ಶ್ರವಣ ಎನ್ನುವ ಈ ವ್ಯಕ್ತಿ ಹಲವು ಅಭ್ಯರ್ಥಿಗಳಿಗೆ  87926 05035 ಈ ನಂಬರ್ ನಿಂದ ಕರೆ ಮಾಡಿ. ಹೊಸಪೇಟೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಜೀವ ಸದಸ್ಯರ ಬಳಿ ತೆರಳಿ ನಾನು ನಿಮ್ಮ ಪರವಾಗಿ ಮತ ಕೇಳುತ್ತೇನೆ. ಓಡಾಲು ಒಂದಿಷ್ಟು ಪೆಟ್ರೋಲ್ ಖರ್ಚಿಗೆ  ಪೋನ್ ಪೇ ನಲ್ಲಿ ಹಣ ನೀಡಿ ಎಂದು ಕೇಳುತ್ತಾನೆ.
ಪ್ರಚಾರದ ಬಗ್ಗೆ ನಂಬಿಸಲು ಒಂದಿಬ್ಬರು ಸದಸ್ಯರ ಬಳಿ ತೆರಳಿ ಪೋನ್ ಮಾಡಿ ಹೇಳಿದಂತೆ ಮಾಡುತ್ತಾನೆ. ಅಭ್ಯರ್ಥಿಗಳಿಗೆ ಹಣ ನೀಡಿ ಎಂದು ಪೀಡಿಸುತ್ತಾನೆ.
ಈತನಿಂದ ಯಾವ ಪ್ರಚಾರ ಆಗಲ್ಲ, ಮತಯಾಚನೆಯೂ ಆಗಲ್ಲ. ಜನರ ಮೋಸ ಹೋಗಬೇಕಿಲ್ಲ.
One attachment • Scanned by Gmail