ಸಾಧಕ ಮಹಿಳೆಯರಿಗೆ ಸನ್ಮಾನ
ಹುಬ್ಬಳ್ಳಿ,ಮಾ11: ಸಮಾಜಕ್ಕೆ ಮಹಿಳೆಯ ಕೊಡುಗೆ ಅಪಾರ ಹೀಗಾಗಿ ಮಹಿಳೆಯರಿಗೆ ಸಮಾನ ಅದ್ಯತೆ ಕೊಟ್ಟಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋಹನ್ ಲಿಂಬಿಕಾಯಿ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹಾಗೂ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ವತಿಯಿಂದ ನಗರದ ಗೋಕುಲ್ ರಸ್ತೆಯ ಬಸವೇಶ್ವರ ನಗರದ ‘ವಿಶ್ವಕ್ರಮ ಚೇತನ’ ಡಾ.ಕೆ.ಎಸ್.ಶರ್ಮಾ ಕ್ಯಾಂಪಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಹಿಳೆಗೆ ಮಹಿಳೆಯೇ ಸರಿಸಾಟಿ ಎಂದ ಅವರು ಮಹಿಳೆ ತನಗೆ ಬರುವ ಸಮಸ್ಯೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಆ ಸಮಸ್ಯೆಗಳು ಮಜಿನಂತೆ ಕರುಗುತ್ತವೆ ಎಂದು ನುಡಿದರು.
ಅಬಾಕಸ್ ತರಬೇತಿ ಸಂಸ್ಥೆ ನಿರ್ದೇಶಕರಾದ ಗೀತಾ ವಿ. ಕಬಾಡೆ ಹಾಗೂ ವಿಶ್ವಶ್ರಮ ಚೇತನದ ಮಹಾಪೆÇೀಷಕರಾದ ಸುಮಿತ್ರಾ ಪೆÇೀತ್ನಿಸ್ ಮತ್ತು ಸುಲೋಚನಾ ಪೆÇೀತ್ನಿಸ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಅತಿಥಿಗಳಾಗಿ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಮುಖ್ಯ ಆಡಳಿತಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಚರಂತಯ್ಯ ಹಿರೇಮಠ ವಹಿಸಿದರು.
ಕಾರ್ಯಕ್ರಮ ಸಂದರ್ಭದಲ್ಲಿ ಡಾ. ಸೋಮಶೇಖರ್ ಹುದ್ದಾರ, ಡಾ. ಮಹೇಶ ದೇಸಾಯಿ, ಡಾ. ಗೌರೀಶ್ ಅಸೂಟಿ, ಡಾ. ಪುಷ್ಪಲತಾ ಹಿರೇಮಠ, ಕಾರ್ಯಕಾರಿ ಮಂಡಳಿ ಸದಸ್ಯರು, ಶಿಕ್ಷಕರ ವೃಂದ, ಸಿಬ್ಬಂದಿಗಳು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.