ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ
ನವಲಗುಂದ,ಮಾ11: ಪೆÇೀಷಕರು ಮಕ್ಕಳ ಭಾವನೆಗೆ ಒತ್ತು ನೀಡುವುದರ ಜೊತೆಗೆ ಉತ್ತಮ ಸಂಸ್ಕಾರದ ಪಾಠ ಕಲಿಸಬೇಕು. ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಅಗತ್ಯ. ಪ್ರತಿಯೊಬ್ಬರು ಒಗ್ಗಟ್ಟಾಗಿ ಮಕ್ಕಳ ಶಿಕ್ಷಣದ ಅಭಿವೃದ್ಧಿಗೊಸ್ಕರ ಶ್ರಮಿಸುವುದು ಅಗತ್ಯವಾಗಿದೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ತಾಲ್ಲೂಕಿನ ಮೊರಬ ಗ್ರಾಮದ ಶ್ರೀಮತಿ ಅಕ್ಕಮಹಾದೇವಿ ಬ. ಹಂಚಿನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ಇದರ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದಕ್ಕೂ ಮೊದಲು ಶಾಲಾ ಆವರಣದಲ್ಲಿ ವಿವೇಕ ಯೋಜನೆ ಹಾಗೂ ಸಿಎಸ್‍ಆರ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ನೂತನ ಕೊಠಡಿಗಳನ್ನು ಶಾಸಕ ಕೋನರಡ್ಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾಂತೇಶ ಹಂಚಿನಾಳ, ಕಲ್ಲಪ್ಪ ಹನಸಿ, ಎ ಎ ಜಾಗಿರದಾರ, ನಾಗರತ್ನ ಕೇರಿಮನಿ, ಮಂಜುನಾಥ್ ಅಜಗೊಂಡ, ಕುಮಾರ ಲಕ್ಕಮ್ಮನವರ, ರವಿ ಕಿತ್ತೂರ, ಶಿವು ಬೇಡಸುರ, ಸೋಮಣ್ಣ ತರ್ಲಘಟ್ಟ, ಸೋಮಣ್ಣ ಬ್ಯಾಹಟ್ಟಿ ಸೇರಿದಂತೆ ಎಸ್ ಡಿಎಂಸಿ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಶಾಲಾ ಮುಖ್ಯಪಾಧ್ಯಾಯರು, ಶಿಕ್ಷಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.