ರಂಗಭೂಮಿ ಆಕರ್ಷಣೆಯ ಹೆಚ್ಚಿಸುವ ತಂತ್ರಜ್ಞಾನ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.11:- ತಂತ್ರಜ್ಞಾನ ಬಳಕೆಯು ರಂಗಭೂಮಿಯ ಮೂಲ ಸಂಪ್ರಾದಾಯಕ್ಕೆ ಧಕ್ಕೆ ತರಲಿದೆ ಎಂದು ಕೆಲವರಲ್ಲಿ ಅಸಮಾಧಾನವಿದೆ ಎಂದು ರಂಗ ನಿರ್ದೇಶಕ ಪೆÇ್ರ.ದೀಪನ್ ಶಿವರಾಮನ್ ಬೇಸರ ವ್ಯಕ್ತಪಡಿಸಿದರು.
ನಗರದ ರಂಗಾಯಣದ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಆಯೋಜಿಸಿರುವ ರಂಗಭೂಮಿ-ತತ್ವಜ್ಞಾನ ಮತ್ತು ಅವುಗಳ ಸಾಂಸ್ಕೃತಿಕ ಪ್ರಭಾವ ವಿಷಯದ ಕುರಿತು ಅ ವರು ಮಾತನಾಡಿದರು.
ತಂತ್ರಜ್ಞಾನ ಎಂಬುದು ಒಂದು ಸಾಧನ. ಅದು ರಂಗಭೂಮಿಯ ಆಕರ್ಷಣೆಯನ್ನು ಹೆಚ್ಚಿಸಲಿದೆ. ಸಿನಿಮಾ ನೇರ ಪ್ರಸಾರದ ಮನರಂಜನೆ ಕಾರ್ಯಕ್ರಮವಲ್ಲ. ರಂಗಭೂಮಿಯಲ್ಲಿ ನೇರ ಪ್ರಸಾರವಾದದ್ದು. ಹೀಗಾಗಿ ಇಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿಲು ತಂತ್ರಜ್ಞಾನ ಅವಶ್ಯ. ಹೀಗಾಗಿ ತಂತ್ರಜ್ಞಾನವು ರಂಗಭೂಮಿ ಅವಿಭಾಜ್ಯವಾಗಿದೆ ಎಂದು ಹೇಳಿದರು.
ರಂಗಭೂಮಿಯಲ್ಲಿ ತಂತ್ರಜ್ಞಾನ ಬಳಕೆ ಈಚೆಗೆ ಅಳವಡಿಸಿ ಕೊಂಡಿರುವುದಲ್ಲ. ಗ್ರೀಕ್ ಕಾಲದ ನಾಟಕಗಳಿಂದಲೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ಈಗ ಹೊಸ ಅವಿಷ್ಕಾರಗಳೊಂದಿಗೆ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ರಂಗಭೂಮಿಯೆಂದರೆ ಹೀಗೆ ಇರಬೇಕು ಎಂಬ ಮನಸ್ಥಿತಿವುಳ್ಳವರು ತಂತ್ರಜ್ಞಾನ ಬಳಕೆಯ ಅಸಮಾಧಾನವಿದೆ. ಹೀಗಾಗಿ ರಂಗಭೂಮಿ ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗಲಿದೆ ಎಂದು ಅವರು ವಾದವಾಗಿದೆ ಎಂದು ಹೇಳಿದರು.
ಕಳೆದ ಒಂದು ದಶಕದಲ್ಲಿ ರಂಗಭೂಮಿಯಲ್ಲಿ ಹೆಚ್ಚು ಬದಲಾವಣೆಯಾಗಿದೆ. ಅಂತರ್ಜಾಲ ಬಳಕೆಯಿಲ್ಲದೆ ಈಗೀನ ಜನ ಸಾಮಾನ್ಯರ ಜನರ ಜೀವನವಿಲ್ಲ ಎಂಬಂತೆ ರಂಗಭೂಮಿಯಲ್ಲಿ ತಂತ್ರಜ್ಞಾನವು ಬೆಸೆದುಕೊಂಡಿದೆ. ಮೊದಲು ನಾಟಕಗಳಲ್ಲಿ ಹೇಳಿದ್ದನ್ನೆ ಸತ್ಯವೆಂದು ನಂಬುತ್ತಿದ್ದರು. ನಾಟಕಕಾರರು ತತ್ವಜ್ಞಾನಿಗಳೆಂದು ನಂಬುತ್ತಿದ್ದರು. ಆದರೆ, ಈಗ ಅವರನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ನಟ ಶಕೀಲ್ ಅಹಮ್ಮದ್ ಮಾತನಾಡಿದರು. ವಿನ್ಯಾಸಕಾರ ಶಶಿಧರ ಅಡಪ, ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಗೋಷ್ಠಿಯಲ್ಲಿ ಹಾಜರಿದ್ದರು.