ದಲಿತ ನಾಯಕ ಕುಟುಂಬದಿಂದ ಸರ್ಕಾರಕ್ಕೆ ವಂಚನೆ: ಆರೋಪ
ಸಂಜೆವಾಣಿ ವಾರ್ತೆ
ಹುಣಸೂರು,ಮಾ.11- ತಾಲ್ಲೂಕಿನ ಹಿರಿಯ ದಲಿತ ನಾಯಕ ಕುಟುಂಬವೊಂದು ಸರಕಾರಿ ಸವಲತ್ತಿಗಾಗಿ ಪದೇ ಪದೇ ವಿಳಾಸ ದಾಖಲೆಗಳನ್ನು ಬದಲಾಯಿಸುತ್ತ ಸರ್ಕಾರಕ್ಕೆ ಮೋಸ ಮಾಡುತ್ತಿದೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಕಟ್ಟೆಮಳಲವಾಡಿ ಶೃಂಗಾರ್ ಆ ಕುಟುಂಬದ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಹಿರಿಯ ದಲಿತ ಮುಖಂಡ ನಿಂಗರಾಜ್ ಮಲ್ಲಾಡಿ ಮಗಳು ಅರ್ಪಿತಾ ಇತೀಚಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮೈಸೂರು ವಿಳಾಸದ ದಾಖಲೆಗಳನ್ನು ನೀಡಿದರು.
ಆದರೆ ಕೆಲಸ ಗಿಟ್ಟಿಸಿಕೊಳ್ಳುವ ದುರುದ್ದೇಶದಿಂದ ಅರ್ಜಿ ಪರಿಶೀಲನೆ ವೇಳೆ ಹುಣಸೂರು ವಿಳಾಸ ನೀಡುವ ಮೂಲಕ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಶೃಂಗಾರ್ ಆರೋಪಿಸಿದ್ದಾರೆ.
ಈ ಹಿಂದೆಯೂ ಈ ಕುಟುಂಬದ ಸದಸ್ಯರು ಮೈಸೂರು ವಿಳಾಸ ನೀಡಿ ಸರ್ಕಾರದ ವತಿಯಿಂದ ಮೈಸೂರಿನ ಏಕಲವ್ಯ ನಗರದಲ್ಲೂ ಎರಡು ಮೂರು ಮನೆಗಳನ್ನು ಪಡೆದಿರುವ ಉದಾಹರಣೆ ಇದೆ. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯಿಂದ ಸಬ್ಸಿಡಿಯಲ್ಲಿ ಕಾರುಗಳನ್ನು ಸಹ ಪಡೆದಿದ್ದಾರೆ ಎಂದು ಆರೋಪಿಸಿರುವ ಶೃಂಗಾರ್ ಇದಕ್ಕೆ ಕೆಲ ಅಧಿಕಾರಿಗಳು ಪೆÇ್ರೀತ್ಸಾಹಿಸುತ್ತಾ ಬಂದಿದ್ದು ಅವರುಗಳ ವಿರುದ್ಧ ಕೂಡ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.