ಇಷ್ಟಲಿಂಗದ ಉಪಾಸನೆಯಿಂದ ನಿಮ್ಮಲ್ಲಿರುವ ಶಕ್ತಿಯನ್ನು ಬೆಳೆಸಿಕೊಳ್ಳಿ
ಅಥಣಿ : ಮಾ.11:ಇಷ್ಟಲಿಂಗವನ್ನು ಎಡ ಅಂಗೈಯಲ್ಲಿಟ್ಟು ಧ್ಯಾನಿಸುವುದರಿಂದ ನಮ್ಮ ಧ್ಯಾನವು ಮೆದುಳಿನ ಬಲಭಾಗದ ವಲಯ ದೊಂದಿಗೆ ಸಂಪರ್ಕ ಹೊಂದುತ್ತದೆ. ಮತ್ತು ಮೆದುಳಿಗೆ ಬಲಭಾಗದ ಎಲ್ಲ ಗುಣ ಸ್ವಭಾವಗಳು ಪ್ರಭಾವಿಯಾಗಿ ಶಕ್ತಿ ಸಾಮಥ್ರ್ಯಗಳು ವೃದ್ಧಿಸುತ್ತವೆ ಎಂದು ಶಾಂತವೀರ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಸುಕ್ಷೇತ್ರ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಹಜ ಶಿವಯೋಗದ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆಯ ಪ್ರತ್ಯಕ್ಷತೆ ನೆರವೇರಿಸಿ ಆಶೀರ್ವಚನ ನೀಡಿದರು.
ಇಷ್ಟಲಿಂಗದ ಧ್ಯಾನದಿಂದ ನಮ್ಮ ಮೆದುಳಿನ ಬಲಭಾಗದ ಧಾರಣಾಶಕ್ತಿಯು ಹೆಚ್ಚಾಗುತ್ತದೆ. ಕ್ರೀಯಾಶೀಲತೆಯೂ ವೃದ್ಧಿಸುತ್ತದೆ. ಮೆದುಳಿನ ಶಕ್ತಿಸಾಮಥ್ರ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಲು ಸಮರ್ಥವಾದರೆ ಏನಾಗಬಹುದು ಎಂಬುದನ್ನು ಕಲ್ಪಿಸಲು ಕೂಡ ಸಾಧ್ಯವಿಲ್ಲ. ಅಥಣಿ ಮುರುಘೇಂದ್ರ ಶಿವಯೋಗಿಗಳು ಇಷ್ಟಲಿಂಗ ಪೂಜೆ ಮತ್ತು ಬಸವಾದಿ ಶರಣರ ವಚನಗಳನ್ನು ನಿಜ ಜೀವನದಲ್ಲಿ ಪಾಲಿಸುವ ಮೂಲಕ ಶುಭ ಯೋಗದ ಶಿಖರವನ್ನು ಏರಿ ಶಿವಯೋಗ ಸಾಧಿಸಿದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವೆಲ್ಲರೂ ನಡೆದಾಗ ಜೀವನ ಪಾಇಷ್ಟಲಿಂಗ ಪೂಜೆಯಿಂದ ದೈಹಿಕ ಆರೋಗ್ಯ, ಮನಸ್ಸನ್ನು ಶಾಂತವಾಗಿಡಲು ಹಾಗೂ ನಾನಾ ಚಿಂತೆಗಳಲ್ಲಿ, ಬದುಕಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.ವನವಾಗುತ್ತದೆ ಎಂದು ಹೇಳಿದರು.
ಶರಣ ಸಂಸ್ಕøತಿ ಉತ್ಸವದ ನೇತೃತ್ವ ವಹಿಸಿರುವ ಗಚ್ಚಿನ ಮಠದ ಪೀಠಾಧಿಪತಿ ಶಿವಬಸವ ಸ್ವಾಮೀಜಿ ಮಾತನಾಡಿ ಇಷ್ಟಲಿಂಗ ಪೂಜೆಯಿಂದ ದೈಹಿಕ ಆರೋಗ್ಯ, ಮನಸ್ಸನ್ನು ಶಾಂತವಾಗಿಡಲು ಹಾಗೂ ನಾನಾ ಚಿಂತೆಗಳಲ್ಲಿ, ಬದುಕಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಈ ಇಷ್ಟಲಿಂಗ ಪೂಜೆಯನ್ನ ಶ್ರದ್ಧೆ ಮತ್ತು ನಿಷ್ಠೆ ಬೇಕು ಅಷ್ಟೇ. ಇದನ್ನು 12ನೇ ಶತಮಾನದಲ್ಲಿ ಗುರು ಬಸವಣ್ಣನವರು ಅವಿಷ್ಕಾರ ಮಾಡಿದರು. ಮುರುಗೇಂದ್ರ ಸ್ವಾಮೀಜಿ ಅವರು ಕೂಡ ಇಷ್ಟು ಲಿಂಗ ಪೂಜೆಯ ಮೂಲಕ ಶಿವಯೋಗದ ಉತ್ತುಂಗ ಶಿಖರವನ್ನು ಏರಿ ಶಿವಯೋಗಿಗಳು ಎನಿಸಿಕೊಂಡರು. ಮಹಾಶಿವರಾತ್ರಿ ಪ್ರಯುಕ್ತ ಗಚ್ಚಿನ ಮಠದಲ್ಲಿ ಇಷ್ಟಲಿಂಗ ಪೂಜೆ ಮತ್ತು ಮಹಾಶಿವರಾತ್ರಿ ಕಾರ್ಯಕ್ರಮಗಳನ್ನು ಭಕ್ತರ ಸಹಾಯ ಸಹಕಾರದಿಂದ ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಿದ್ಧ ಕಬೀರ ಸ್ವಾಮೀಜಿ, ಡಾ. ವಿವೇಕ ದೇವರು, ಮೋಕ್ಷ ಪತಿ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ , ವೀರೇಶ್ವರ ದೇವರು, ಶಂಕರ ಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ವೇಳೆ ಸಮಾಜಸೇವಕರಾದ ಸಿದ್ದು ಹಂಡಗಿ ಮತ್ತು ಮಹಾಂತೇಶ ಕೌಲಾಪುರ ಅವರನ್ನು ಸನ್ಮಾನಿಸಲಾಯಿತು. ರಾಮನಗೌಡ ಪಾಟೀಲ ಸ್ವಾಗತಿಸಿದರು, ಶಿವಪುತ್ರ ಯಾದವಾಡ ನಿರೂಪಿಸಿದರು, ಶಿವಾನಂದ ದಿವಾನಮಳ ವಂದಿಸಿದರು.