ಜನರಲ್ ಬೋಗಿ ಹೆಚ್ಚಿಸುವಂತೆ ಆಗ್ರಹಿಸಿ ಎಐಡಿವೈಓ ಸಂಘಟನೆ ಯಿಂದ ಮನವಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ10: ನಿರುದ್ದೋಗಿಗಳು, ಬಡವರು, ಕೂಲಿ ಕಾರ್ಮಿಕರ ಆಸರೆಯಾಗಿರುವ ರೈಲ್ವೆಯಲ್ಲಿ ನಿರಂತರವಾಗಿ ಬೋಗಿ ಕಡಿತ ಮಾಡುವ ಕಾರ್ಯವನ್ನು ಖಂಡಿಸಿ ಎಐಡಿವೈಓ ಸಂಘಟನೆ ಹೊಸಪೇಟೆ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತು.
ಈ ಕುರಿತು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಪ್ರಕಾಶ ಬಸವನದುರ್ಗಾ ಮಾತನಾಡಿ ನಿರುದ್ದೋಗ ತಾಂಡವ ಆಡುತ್ತಿರುವ, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಈ ಸಂದರ್ಭದಲ್ಲಿ ರೈಲುಗಳಲ್ಲಿ ಪದೆ ಪದೆ ಬೋಗಗಳನ್ನು ಕಡಿತ ಮಾಡುತ್ತಿದ್ದು ಇದು ಬಡವರ ಗಾಯದ ಮೇಲೆ ಬರೆ ಎಳೆದಂತಾಗಿದೆ ಈ ಎಲ್ಲವೂಗಳ ಹೊರತಾಗಿ ಬಡವರು ಪ್ರಯಾಣಕ್ಕೂ ಈ ದುಬಾರಿಯಕಾಲದಲ್ಲಿ ರೈಲ್ವೆಯನ್ನು ಅವಲಂಬಿಸುತ್ತಿರುವುದು ಸಹ ಹೆಚ್ಚುಗುತ್ತಿದ್ದು ಇಂತಹ ಸಂದರ್ಭದಲ್ಲಿ ಬೋಗಗಳ ಕಡಿತ ಅನೇಕ ತೊಂದರೆಗೆ ಕಾರಣಾಗುತ್ತಿದ್ದು ಇಂತಹ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಅಖಿಲ ಭಾರತ ಜನರಲ್ ಹಾಗೂ ಸ್ಲೀಪರ್ ಬೋಗಿ ಕಡಿತ ದಿನವಾಗಿ ಎಐಡಿವೈಓ ಯುವಜನ ಸಂಘಟನೆ ಅಖಿಲ ಭಾರತ ಮಟ್ಟದಲ್ಲಿ ಆಚರಿಸುತ್ತಿದ್ದು ಹೊಸಪೇಟೆಯಲ್ಲಿಯೂ ವಿಜಯನಗರ ಜಿಲ್ಲಾ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಂಪಾಪತಿ, ಮುಸ್ತಫಾ, ವಿಶಾಲ ಮ್ಯಾಸರ್, ಅಶೋಕ ಮತ್ತು ಪ್ರಶಾಂತ್ ಭಾಗವಹಿಸಿದ್ದರು. ಸ್ಟೇಷನ್ ವ್ಯವಸ್ಥಾಪಕರು ಹಿರಿಯ ಅಧಿಕಾರಿಗಳಿಗೆ ತಮ್ಮ ಮನವಿಯನ್ನು ರವಾನಿಸುವುದಾಗಿ ತಿಳಿಸಿದರು.