ಇವರು ವೀ.ವಿ.ಸಂಘದ ಸದಸ್ಯರ ನಿವಾಸದ ಗೂಗಲ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ಇವರ ಹೆಸರು.ಹೆಚ್.ಎಂ.ಕಿರಣ್ ಕುಮಾರ್, ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಇವರನ್ನು ಸಂಘದ ಸದಸ್ಯರ ನಿವಾಸದ ಗೂಗಲ್ ಎಂದು ಕರೆಯುತ್ತಾರೆ.
ಹಾಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಹಾನಗಲ್ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷರಾಗಿದ್ದು. ಐದನೇ ಬಾರಿಗೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಲು ಚುನಾವಣೆ ಎದಿರಿಸುತ್ತಿದ್ದಾರೆ.
ಆರಂಭದ ಮೂರು ಚುನಾವಣೆಗಳಲ್ಲಿ ಸೋಲು ಕಂಡಿದ್ದ ಕಿರಣ್, ಕಳೆದ ಬಾರಿ ನಾಲ್ಕನೇ ಬಾರಿಗೆ ಜಯ ಖಂಡಿದ್ದರು. ಈಗ ಐದನೇ ಬಾರಿಗೆ ಸ್ಪರ್ಧೆ ಮಾಡಿದ್ದಾರೆ.
ಇವರನ್ನು ವೀ.ವಿ.ಸಂಘದ ಗೂಗಲ್ ಎಂದು ಕರೆಯಲು ಕಾರಣ. ನಗರದಲ್ಲಿರುವ ಸಂಘದ ಸದಸ್ಯರ ಮನೆ, ಯಾವ ಪ್ರದೇಶದಲ್ಲಿದೆ. ಅವರ ಹೆಸರು, ಮೊಬೈಲ್ ನಂಬರ್ ಬಗ್ಗೆ ಕೇಳಿದರೆ ತಕ್ಷಣ ಮಾಹಿತಿ ನೀಡುತ್ತಾರೆ. ಯಾವ ಸದಸ್ಯರು ವಿಳಾಸ ಬದಲಿಸಿದ್ದಾರೆ. ಯಾವ ಕುಟುಂಬದೊಂದಿಗೆ ಸಂಪರ್ಕ, ಏನು ಕೆಲಸ ಮಾಡುತ್ತಾರೆ ಎಂದೆಲ್ಲ ಗೊತ್ತು ಇವರಿಗೆ.
ನಗರದ 1200 ಕ್ಕೂ   ಹೆಚ್ಚು ಮತದಾರರ ಮನೆಗಳನ್ನು ಬಲ್ಲವರು. ಒಮ್ಮೊಮ್ಮೆ ಗೂಗಲ್ ರೀತಿಯಲ್ಲಿ ಒಂದಿಷ್ಟು ಪರ್ಯಾಯ ಮಾರ್ಗದಲ್ಲೂ ಮನೆಗಳ ಸ್ಥಳಗಳನ್ನು ಪತ್ತೆಹಚ್ಚುತ್ತಾರೆ.
ಸಧ್ಯ ಹಿರಿಯರ ತಂಡಕ್ಕೆ ನಗರದಲ್ಲಿನ ಸದಸ್ಯರ ಮನೆಗಳನ್ನು ತೋರಿಸಿವ ಗೂಗಲ್ ಇವರಾಗಿದ್ದಾರೆ.