ಸಂಗೀತ ಕಲಾವಿದರಿಗೆ ಸಾಧನೆ ಅಗತ್ಯ
ಕಲಬುರಗಿ :ಮಾ.10: ನಿಜವಾದ ಸಂಗೀತ ಕಲಾವಿದನಿಗೆ ಗುರು ಭಕ್ತಿ , ಶ್ರದ್ದೆ ಬೇಕು ಅಂದಾಗ ಮಾತ್ರ ಸಂಗೀತದಲ್ಲಿ ಸಾಧನೆ ಆಗುತ್ತದೆ ಅಂತಹ ಸಾಧನೆ ಮಾಡಿದವರು ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಎಂದು ಷ. ಬ್ರ ಡಾ ಗುರುಮೂರ್ತಿ ಶಿವಾಚಾರ್ಯರು ಹಿರೇಮಠ ಪಾಳಾ ಶ್ರೀಗಳು ಆರ್ಶೀವಚನ ನೀಡಿದರು
ನಗರದ ಕಲಾ ಮಂಡಳದಲ್ಲಿ ಗಡಿನಾಡ ಸಂಗೀತ ಸೇವಾ ಸಂಸ್ಥೆ (ರಿ) ಕಲಬುರಗಿ ಇವರ ವತಿಯಿಂದ ರವಿವಾರ ನಡೆದ ಡಾ. ಪಂ ಪುಟ್ಟರಾಜ ಕವಿ ಗವಾಯಿಗಳವರ 110 ನೇ ಜನ್ಮದಿನೋತ್ಸವದ ಅಂಗವಾಗಿ ಕಾವ್ಯ ಕುಂಚ ಗಾಯನ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂತಹ ಒತ್ತಡ ಜೀವನದಲ್ಲಿ ಸಂಗೀತ ಕೇಳುವುದು ಅವಶ್ಯಕವಾಗಿದೆ. ಸಂಗೀತದಿಂದ ಮನಸ್ಸು ಶಾಂತವಾಗಿರಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ರಾಜಕಾರಣಿ ಅಣ್ಣಾರಾವ ಧೂತ್ತರಗಾಂವ ಮಾತನಾಡಿ, ಸಂಗೀತವು ಸಮಾಜದ ಒಂದು ಕಣ್ಣಾಗಿದೆ. ಹಾನಗಲ್ಲ ಕುಮಾರೇಶ್ವರರು ಸಮಾಜದಲ್ಲಿ ಸಂಗೀತ ಸ್ಥಾನ ಮಾನ ದೊರೆಯಲೆಂದು ಹುಟ್ಟು ಕುರುಡರಾದ ಪಂ. ಪಂಚಾಕ್ಷರಿ ಗವಾಯಿಗಳವರನ್ನು ಮಠಕ್ಕೆ ಕರೆತಂದು ಸಂಗೀತವು ಕಲಿಸಿದರು ಮುಂದೆ ಅದೆ ಮಠದಿಂದ ಪಂ. ಪಂಚಾಕ್ಷರಿ ಗವಾಯಿಗಳವರ ಪ್ರೀತಿಯ ಶಿಷ್ಯರೆ ಪಂ. ಪುಟ್ಟರಾಜ ಕವಿ ಗವಾಯಿಗಳವರು ಎಂದು ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆಯನ್ನು ತಿಳಿಸಿ ನಿಜವಾದ ಸಂಗೀತ ಕಲಾವಿದನಾಗಬೇಕಾದರೆ ನಿರಂತರವಾದ ಸಂಗೀತ ಸಾಧನೆ ಅವಶ್ಯಕ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಬಿ. ಎಚ ನಿರಗುಡಿ ಮಾತನಾಡಿ ಪುಟ್ಟರಾಜ ಕವಿ ಗವಾಯಿಗಳವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ಇವತ್ತಿನ ಈ ವಿಶೇಷ ಕಾರ್ಯಕ್ರಮ ಕಾವ್ಯ ಕುಂಚ ಗಾಯನ ಎಂಬ ಕಾರ್ಯಕ್ರಮ ಇಟ್ಟುಕೊಂಡಿದ್ದು ತುಂಬ ಸಂತೋಷದಾಯಕವಾಗಿದೆ ಎಂದು ಹೇಳಿದರು .
ನಂತರ ಶರಣಬಸವ ವಿಶ್ವವಿದ್ಯಾಲಯ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಲ್ಲಿಕಾರ್ಜುನ ಪೆÇೀಲೀಸಪಾಟೀಲ ಮಾತನಾಡಿ, ಅವರು ಪ್ರತಿಯೊಬ್ಬ ಸಂಗೀತ ಕಲಾವಿದರು ಸಂಗೀತ ಪರಂಪರೆಯು ಹೊಂದಿಕೊಂಡು ಬಂದವರು. ಅಂದ ಅನಾಥರ ಆಶಾ ಕಿರಣವಾಗಿ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ. ಸಂಗೀತ ವಿದ್ಯೆ. ಶಿಕ್ಷಣ. ನೀಡಿ ಸಮಾಜಕ್ಕೆ ಜೀವಂತ ಗುರುಗಳಾಗಿದ್ದಾರೆ ಎಂದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರು. ಡಾ. ಬಸವರಾಜ ಕಲಗುರ್ತಿ ಮಠ. ರೇವಯ್ಯ ವಸ್ತ್ರದಮಠ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು . ನಂತರ ಕಾವ್ಯ ಕುಂಚ ಗಾಯನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ರೀಮತಿ ಕವಿತಾ ಷಣ್ಮುಖ ಪಾಟೀಲ. ರವಿಕುಮಾರ್ ಆಳಂದ. ಪ್ರಶಾಂತ್ ಗೋಲ್ಟಸ್ಮೀತ. ಹಣಮಂತ ಜಮಾದಾರ. ಶ್ರೀಮತಿ ವೀಣಾ ಮಠ ಡಾ. ಕಾಮೇಶ ಕಮಲಾಪೂರ. ಬಸವರಾಜ ಶ್ರೀಂಗೆರಿ. ವಿಕಾಸ ಪಂಚಾಳ ರೇವಣಯ್ಯ ಮಠಪತಿ . ಇವರಿಂದ ಕಾವ್ಯ ಕುಂಚ ಗಾಯನ ಕಾರ್ಯಕ್ರಮಗಳು ನಡೆದವು. ಸೂರ್ಯಕಾಂತ ಶಾಸ್ತ್ರಿ ನಿರೂಪಿಸಿದರು. ಗುರುಶಾಂತಯ್ಯ ಸ್ಥಾವರಮಠ ಸ್ವಾಗತಿಸಿದರು ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ವಂದಿಸಿದರು