ಕೀರ್ತನ, ಸಂಗೀತೋತ್ಸವ
ಗೋಕಾಕ,ಮಾ.10: `ಶಿವನನ್ನು ಭಕ್ತಿಭಾವದಲ್ಲಿಅತ್ಮಸಾಕ್ಷಿಯಾಗಿ ಧ್ಯಾನಿಸಿ ಶಿವರಾತ್ರಿಯನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದುಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಜರುಗಿದ ಮಹಾಶಿವರಾತ್ರಿಯ ಪ್ರವಚನ, ಕೀರ್ತನ ಹಾಗೂ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದಅವರುಮನುಷ್ಯತನ್ನ ನುಡಿ ಮತ್ತು ನಡೆಒಂದಾಗಿರಬೇಕುಎಂದರು.
ಭಕ್ತಿಗೆ ಬಡವ, ಶ್ರೀಮಂತ, ದೊಡ್ಡವ, ಸಣ್ಣವಎನ್ನುವ ಭೇದಇಲ್ಲ. ಸತ್ಪುರುಷರು, ಮಹಾತ್ಮರು, ಶರಣರನ್ನು ಸಾತ್ವಿಕಭಾವದಲ್ಲಿ ನೆನೆಯಬೇಕು.ಅವರ ಸತ್ಕಾರ್ಯಗಳನ್ನು ನೆನೆಯಬೇಕುಎಂದರು.
ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಶಿವರಾಜ ಶಾಸ್ತ್ರೀಗಳು ಮಾತನಾಡಿಶಿವರಾತ್ರಿಗೆ ಮುಖ್ಯವಾಗಿರುವುದು ಸಾತ್ವಿಕ ಭಕ್ತಿಇರಬೇಕು.ಇಂದಿನ ತಾಂತ್ರಿಕ, ಒತ್ತಡ ದಿನಗಳಲ್ಲಿ ನೆಮ್ಮದಿ, ಶಾಂತಿಇಲ್ಲವಾಗಿದೆ.ಭಕ್ತಿಯಲ್ಲಿ ನೆಮ್ಮದಿ ಪಡೆಯಲು ಸಾಧ್ಯಎಂದರು.
ಗಾನಭೂಷನ ವಿರೇಶಕಿತ್ತೂರ, ವಿದ್ವಾನ್ ಶಿವಕುಮಾರ ಗವಾಯಿಗಳ ವಚನ, ಅನುಭಾವ ಗೀತೆಗಳ ಗಾಯನವುಎಲ್ಲರ ಮನಸೂರೆಗೊಳಿಸಿತು. ವಿಜಯದೊಡ್ಡಣ್ಣವರತಬಲಾ ಸಾಥ ನೀಡಿದರು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.
ಬೆಳಿಗ್ಗೆ ಕರ್ತೃಗದ್ಗುಗೆಗೆಅಭಿಷೇಕ, ವಿಶೇಷ ಪೂಜೆ, ರುದ್ರಭಿಷೇಕಜರುಗಿತು.