ಮಹದಾಯಿ ರೈತರಿಂದ ಘೇರಾವ್
ನವಲಗುಂದ,ಮಾ.10: : ಮಹಾದಾಯಿ,ಕಳಸಾ,ಬಂಡೂರಿ ಯೋಜನೆ ಅನುಷ್ಠಾನ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಎನ್,ಎಚ್,ಕೋನರಡ್ಡಿ ಅವರಿಗೆ ಘೇರಾವ್ ಹಾಕುವ ಮೂಲಕ ಲೋಕಸಭೆ ಚುನಾವಣಾ ಪೂರ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಚುನಾವಣೆ ಸಂದರ್ಭದಲ್ಲಿ ಕ್ಷೇತ್ರ ಪ್ರವೇಶ ಮಾಡದಂತೆ ರೈತರು ಹೋರಾಟ ಮಾಡುವುದಾಗಿ ಎಚ್ಚರಿಸಿದ ಘಟನೆ ಶನಿವಾರ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಜರುಗಿದೆ.
ಸರಕಾರಿ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಪಾಳ್ಗೊಳ್ಳಲು ಆಗಮಿಸಿದ್ದ ಕೇಂದ್ರ ಸಚಿವ ಜೋಶಿ ಹಾಗೂ ಶಾಸಕ ಕೋನರಡ್ಡಿ ಅವರಿಗೆ ಘೆರಾವು ಹಾಕಿದ ರೈತ ಮುಖಂಡದರು ಕಳೇದ ಹಲವಾರು ವರ್ಷಗಳಿಂದ ಮಹಾದಾಯಿ ಯೋಜನೆ ಅನುಷ್ಠಾನದ ಆಸೆ ತೋರಿಸಿಯೇ ಅಧಿಕಾರ ಅನುಭವಿಸಿದ್ದು ಸಾಕು, ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ಆರೋಪಗಳನ್ನು ಮಾಡುವುದನ್ನು ಬಿಟ್ಟು ಲೋಕಸಭೆ ಚುನಾವಣೆ ಪೂರ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದಲ್ಲಿ ರೈತರಿಂದ ನಡೆಯುವ ಹೋರಾಟವನ್ನು ಎದುರಿಸಲು ಸಿದ್ದರಾಗಬೇಕೆಂದು ಎಚ್ಚರಿಸಿದರು.
ಬಾಕ್ಸ್:
ಅಳಗವಾಡಿ ಗ್ರಾಮಕ್ಕೆ ಆಗಮಿಸಿದ ಕೇಂದ್ರ ಸಚಿವ ಜೋಶಿ ಅವರಿಗೆ ರೈತ ಮುಖಂಡರು ಘೇರಾವು ಹಾಕಲು ಯತ್ನಿಸಿದಾಗ ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರ ನಡುವೆ ಕೆಲ ಕಾಲ ಮಾತಿನ ಚಕಮಕಿ,ನಡೆಯಿತಲ್ಲದೇ ನಮ್ಮ ಗ್ರಾಮದ ಕೆಲ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ಸಚಿವರಿಗೆ ಘೇರಾವು ಹಾಕುವುದು ಸರಿಯಲ್ಲ. ಬೇಕಾದರೆ ನಿಮ್ಮ ಊರಿಗೆ ಬಂದಾಗ ಇಂತಹ ಕೆಲವ ಮಾಡಿ ಎಂದು ವಾಗ್ವಾದ ನಡೆಯಿತು, ನಂತರ ಸಚಿವ ಜೋಶಿಯವರೆ ಎಲ್ಲವನ್ನು ಸಂಬಾಳಿಸಿ ಹೋರಾಟಗಾರರನ್ನು ಸಮಾಧಾನ ಪಡಿಸಿದರು.