ಖಾಸ್ಗತೇಶ್ವರ ಕತೃಗದ್ದುಗೆಯಲ್ಲಿ ಅಪಾರ ಶಕ್ತಿ ಅಡಗಿದೆ:ಚನಮಲ್ಲಶ್ರೀ
ತಾಳಿಕೋಟೆ:ಮಾ.10: ಶ್ರೀ ಖಾಸ್ಗತೇಶ್ವರ ಮಠವು ಅನೇಕ ಜ್ಞಾನಿಗಳನ್ನು ಸಮಾಜಕ್ಕೆ ಶ್ರೀರಕ್ಷೆಯಾಗಿ ಕೊಟ್ಟಂತಹ ಮಠವಾಗಿದೆ ಶ್ರೀಮಠದ ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಕತೃಗದ್ದುಗೆಯಲ್ಲಿ ಅಪಾರವಾದ ಶಕ್ತಿ ಅಡಗಿದೆ ಎಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ ಸಂಸ್ಥಾನ ಗಚ್ಚಿನ ಹಿರೇಮಠದ ಶ್ರೀ ಮ.ಘ.ಚ. ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಶುಕ್ರವಾರರಂದು ಶಿವರಾತ್ರಿ ನಿಮಿತ್ಯವಾಗಿ ಶ್ರೀ ಖಾಸ್ಗತೇಶ್ವರ ಮಠಕ್ಕೆ ಬೆಟ್ಟಿ ನೀಡಿ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಕತೃಗದ್ದುಗೆಗೆ ಮಹಾ ಪೂಜೆ ಸಲ್ಲಿಸಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ಶ್ರೀ ಖಾಸ್ಗತರು ಅಪಾರವಾದ ಪಾಂಡಿತ್ಯವನ್ನು ಹೊಂದಿದವರಾಗಿದ್ದರು ಮಳೆ ಇಲ್ಲದೇ ಜನರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ವರುಣನ ಕೃಪೆಗೈದು ಸಂಪತ್ ಬರೀತವಾದ ಫಸಲನ್ನು ಬೆಳೆಯಲು ಅನುವು ಮಾಡಿಕೊಟ್ಟು ಈ ಭಾಗದಲ್ಲಿ ಚೀರಸ್ಮರಣೀಯರಾಗಿ ಉಳಿದುಕೊಂಡಿದ್ದಾರೆ ಕಷ್ಟವೆಂದು ಶ್ರೀಮಠಕ್ಕೆ ಬಂದವರಿಗೆ ಯಾವಾಗಲು ಹಾಗೆ ಕಳುಹಿಸಿದ ಶ್ರೀಮಠವಲ್ಲಾ ಕಷ್ಟದಿಂದ ಸಂತೋಷದವರೆಗೂ ಭಕ್ತರೊಂದಿಗೆ ಇದ್ದಂತಹ ಏಕೈಕ ಮಠ ಶ್ರೀ ಖಾಸ್ಗತ ಮಠವಾಗಿದೆ ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೋರೋನಾ ಸಂದರ್ಬದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿ ಊಟಕ್ಕೆ ಪರದಾಡುತ್ತಿದ್ದ ಸಮಯದಲ್ಲಿ ಶ್ರೀ ಮಠದ ಉತ್ತರಾಧಿಕಾರಿ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಆಹಾರ ದಾನ್ಯಗಳ ಕಿಟ್‍ಗಳನ್ನು ಶ್ರೀಮಠದಿಂದ ತಯಾರಿಸಿ 23 ಸಾವಿರ ಕುಟುಂಭಗಳಿಗೆ ಆಸರೆಯಾಗುವಂತಹ ಕಾರ್ಯ ಮಾಡಿದ್ದಾರೆ ಒಳ್ಳೆಯ ಜ್ಞಾನದ ಪಾಂಡಿತ್ಯವನ್ನು ಹೊಂದಿರುವ ಶ್ರೀ ಸಿದ್ದಲಿಂಗ ದೇವರು ಮುಂದೊಂದು ದಿನ ದೇಶದಲ್ಲಿಯೇ ಭಕ್ತರ ದಂಡು ಶ್ರೀಮಠದ ಕಡೆಗೆ ನೋಡುವಂತಾಗಲಿದೆ ಅಂತಹ ಅದ್ಭುತ್ ಶಕ್ತಿಯನ್ನು ಹೊಂದಿರುವ ಶ್ರೀ ಖಾಸ್ಗತೇಶ್ವರ ಮಠಕ್ಕೆ ಶಿವರಾತ್ರಿಯ ನಿಮಿತ್ಯವಾಗಿ ಬೆಟ್ಟಿ ನೀಡಿ ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಕತೃಗದ್ದುಗೆಗೆ ಪೂಜೆ ಸಲ್ಲಿಸಿ ದೇಶದ ಒಳಿತಿಗಾಗಿ ಕೇಳಿಕೊಂಡಿದ್ದೇನೆಂದ ಶ್ರೀಗಳು ಶ್ರೀ ಖಾಸ್ಗತರ ನೆಲದಲ್ಲಿ ಜನಿಸಿದ ಎಲ್ಲರು ದನ್ಯರು ಎಂದರು.
ನಂತರ ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಶ್ರೀಮತಿ ವಿದ್ಯಾಶ್ರೀ ವಿರಕ್ತಮಠ ಅವರೊಂದಿಗೆ ಶ್ರೀಮಠದ ವತಿಯಿಂದ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೇ ಕೆಲವು ಸಲಹೆಗಳನ್ನು ನೀಡಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ವೇ.ವಿಶ್ವನಾಥ ವಿರಕ್ತಮಠ, ಹಾಗೂ ಶ್ರೀಶೈಲ ಹಿರೇಮಠ, ಬಸನಗೌಡ ಫೀರಾಪೂರ, ಸುರೇಶ ಪುಲಸ್, ಶ್ರೀಮತಿ ಅಕ್ಕಮಹಾದೇವಿ ವಿರಕ್ತಮಠ, ಶ್ರೀಮತಿ ದ್ರಾಕ್ಷಾಯಿಣಿ ದೀನಾ, ಕುಮಾರ ವಿರಕ್ತಮಠ, ಮಹಾಂತೇಶ ವಿರಕ್ತಮಠ, ಭಂಟನೂರ ಶರಣಮ್ಮ, ಮೊದಲಾದವರು ಉಪಸ್ಥಿತರಿದ್ದರು.