ನಮೋ ಯುವ ಚೌಪಾಲ ಕಾರ್ಯಕ್ರಮ
ಚಿಟ್ಟಗುಪ್ಪ,ಮಾ.10-ಇಂದು ಚಿಟಗುಪ್ಪ ಪಟ್ಟಣದಲ್ಲಿ ನಮೋ ಯುವ ಚೌಪಾಲ ಕಾರ್ಯಕ್ರಮ ಜರುಗಿತು. ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಪಸರ್ಗಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರೆವೇರಿತು.
ಈ ಸಂದರ್ಭದಲ್ಲಿ ಹುಮನಾಬಾದ್ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಸಾಗರ್ ನಾರಾಯಣಪುರ, ಶಿವಕುಮಾರ್ ಮಾಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಚಿನ್ ಮಠಪತಿ, ಹುಮ್ನಾಬಾದ್ ಮಂಡಳ ಕಾರ್ಯದರ್ಶಿ ಶುಭಂ ರಂಗದಾಳ, ಚಿಟಗುಪ್ಪ ಪಟ್ಟಣ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ್ ರಾಜಪುರ್, ಶಕ್ತಿ ಕೇಂದ್ರ ಅಧ್ಯಕ್ಷ ಸಾಯಿಕುಮಾರ್ ಶಿರ್ಕೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.