ಅಮರೇಶ್ವರ ಅದ್ದೂರಿ ರಥೋತ್ಸವ : ತೇರು ಎಳೆದು ಪಾವನರಾದ ಭಕ್ತ ಸಮೂಹ ಎಲ್ಲೆಡೆ ಮೊಳಗಿದ ಓಂ ಭಲಾ ಶಂಕರ ಭಲಾ ಉದ್ಘೋಷ
ಔರಾದ್ :ಮಾ.10: ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಪಟ್ಟಣದ ಐತಿಹಾಸಿಕ ಪ್ರಸಿದ್ಧಿ ಪಡೆದ ಆರಾಧ್ಯ ದೈವ ಶ್ರೀ ಉದ್ಭವಲಿಂಗ ಅಮರೇಶ್ವರರ ರಥೋತ್ಸವ ಇಂದು ನಸುಕಿನ ಜಾವ ಅದ್ದೂರಿಯಾಗಿ ಸಹಸ್ರಾರು ಭಕ್ತ ಸಮೂಹದ ನಡುವೆ ಜರುಗಿತು.
ಸತತ ಐದು ದಿನಗಳಿಂದ ಪಟ್ಟಣದ ಅಮರೇಶ್ವರ ಮಂದಿರದಿಂದ ಸಾಗಿದ ಪಲ್ಲಕ್ಕಿ ಉತ್ಸವದ ಮೇರವಣಿಗೆ ಪಟ್ಟಣದ ದೇಶಮುಖ ಗಲ್ಲಿ, ಖೂಬಾಗಲ್ಲಿ, ಶೆಟಕಾರ ಗಲ್ಲಿ, ಗಾಂಧಿ ವೃತ್ತ, ತಾಲೂಕು ಆಸ್ಪತ್ರೆ, ಪಶು ಆಸ್ಪತ್ರೆ ಮೂಲಕ ಅಗ್ನಿ ಕುಂಡಕ್ಕೆ ತಲುಪಿತು. ಐದನೇ ದಿನವಾದ ಶಿವರಾತ್ರಿ ಅಮಾವಾಸ್ಯೆಯ ದಿನ ಅಮರೇಶ್ವರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು, ರಥವನ್ನು ಹೂಗಳಿಂದ ಹಾಗೂ ದೀಪಗಳಿಂದ ಅಲಂಕರಿಸಿ ವಿವಿಧ ಧಾರ್ಮಿಕ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು, ನಂತರ ರಥವನ್ನು ಭಕ್ತರು ಶ್ರೀ ಅಮರೇಶ್ವರರ ಜೈ ಘೋಶದೊಂದಿಗೆ ರಥವನ್ನು ಎಳೆದು ಪುನಿತರಾದರು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು, ಎಲ್ಲೆಡೆ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರು ಬೆಂಡು ಬತಾಸೆ ಹಾರಿಸಿ ಭಕ್ತಿ ಸಮರ್ಪಣೆ ಮಾಡಿದರು. ರಥೋತ್ಸವದಲ್ಲಿ ಭಕ್ತರಿಂದ ಓಂ ಭಲಾ ಶಂಕರ ಭಲಾ ಶ್ರೀ ಅಮರೇಶ್ವರ ಮಹಾರಾಜ ಕಿ ಜೈ ಎಂಬ ಜೈ ಘೋಶಗಳು ಕೇಳಿ ಬಂದವು, ಜಾತ್ರೆಯಲ್ಲಿ ಚಿಕ್ಕವರು, ದೋಡ್ಡವರು ಬ್ಯಾಂಡ್ ಬಾಜಾ, ಹಲಗೆ, ಡಿಜೆ ಸಂಗೀತದ ಮುಂದೆ ಕುಣಿದು ಕಿಪ್ಪಳಿಸಿದ್ದರು, ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಕೋಲಾಟ ಪ್ರದರ್ಶನ ನೋಡಿ ಜನರು ರೋಮಾಂಚನಗೊಂಡರು.
ಶುಕ್ರವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಮರೇಶ್ವರ ಮಂದಿರಕ್ಕೆ ಆಗಮಿಸಿ ದರುಶನ ಪಡೆದರು. ಶನಿವಾರ ಮುಂಜಾನೆ ಶಾಸಕ ಪ್ರಭು ಚವ್ಹಾಣ್, ಕಾಂಗ್ರೇಸ್ ಮುಖಂಡ ಭೀಮಸೇನರಾವ್ ಸಿಂಧೆ ಸೇರಿದಂತೆ ಇನ್ನಿತರ ಅನೇಕ ಮುಖಂಡರುಗಳು ಅಗ್ನಿಕುಂಡಕ್ಕೆ ಪ್ರದಕ್ಷಿಣೆ ಹಾಕಿ, ಅಗ್ಗಿ ತುಳಿದು ಭಕ್ತಿಭಾವ ಮೇರೆದರು.
ಇದೇ ವೇಳೆ ಉದ್ಭವಲಿಂಗ ಅಮರೇಶ್ವರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಹಸ್ರಾರು ಭಕ್ತರಿಗೆ ಉಚಿತವಾಗಿ ಲಡ್ಡುಪ್ರಸಾದ ವಿತರಿಸಲಾಯಿತು. ಪಟ್ಟಣದ ವಿವಿಧ ಬದಿಗಳಲ್ಲಿ ಭಕ್ತರಿಂದ ಅನ್ನದಾಸೋಹ , ಹಣ್ಣು ಹಂಪಲುಗಳ ದಾಸೋಹ ವ್ಯವಸ್ಥೆ ಜರುಗಿತು.
ದೇವರಿಗೆ ಆಗಮಿಸಿದ ಸಹಸ್ರಾರು ಭಕ್ತರು ಆರಾಧ್ಯ ದೈವನಿಗೆ ನೆನೆದು , ನಮಿಸಿ, ನೈವೇಧ್ಯೆ , ಕಾಯಿ ಕರ್ಪೂರ ಅರ್ಪಿಸಿ, ದಾಸೋಹದಲ್ಲಿ ಪ್ರಸಾದ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ, ಡಾ. ಶಂಕರರಾವ್ ದೇಶಮುಖ, ಸುನೀಲಕುಮಾರ ದೇಶಮುಖ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ್, ಎಪಿಎಂಸಿ ಅಧ್ಯಕ್ಷ ಧೋಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ್ ಅಲಮಾಜೆ, ಶರಣಪ್ಪ ಪಂಚಾಕ್ಷರಿ, ಸೂರ್ಯಕಾಂತ ಅಲಮಾಜೆ, ಶಿವಕುಮಾರ ಘಾಟೆ, ರಾಜಕುಮಾರ್ ಹಲಬರ್ಗೆ, ರಾಮಣ್ಣ ವಡೆಯರ, ಸಾಯಿನ್ನಾಥ ಘೋಡಕೆ, ಶರಣು ಪಾಟೀಲ್, ಅನೀಲಕುಮಾರ್ ನಿರ್ಮಳೆ, ಸುಧಾಕರ ಕೊಳ್ಳುರ್, ಶಂಕು ನಿಷ್ಪತೆ, ಅನೀಲ್ ಬೇಲೂರೆ, ಕೇರಬಾ ಪವಾರ್, ಶಿವಾನಂದ ಕನಕೆ, ರಮೇಶ ಗೌಡಾ , ಸಂದೀಪ್ ಪಾಟೀಲ್, ಸೇರಿದಂತೆ ಇತರರಿದ್ದರು.
ಜಾತ್ರೆ ಸಕಲ ಸುಸಜ್ಜಿತವಾಗಿ ಜರುಗಲು ಎಸ್ ಪಿ ಚನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು. ಡಿವೈ ಎಸ್ ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್., ಕಮಲನಗರ ಸಿಪಿಐ ಅಮರಪ್ಪ ಸೋಬಲ್, ಪಿಎಸ್ ಐ ಗಳಾದ ಉಪೇಂದ್ರ, ರಾಹುಲ್ ಪವಾಡೆ, ಬಸವರಾಜ್, ಪುಷ್ಪಾ, ವಾತ್ಸಲ್ಯ, ಆಶಾ ರಾಠೋಡ್ ಇತರರಿದ್ದರು.
ದಂತವೈಧ್ಯೆ ಚಿತ್ರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
ಪಟ್ಟಣದ ಲಕ್ಷ್ಮಿಬಾಯಿ ಸಂಗ್ರಾಮ ದಂಪತಿಗಳ ಮಗಳಾದ ಕುಮಾರಿ ಐಶ್ವರ್ಯ ಸುಂದಾಳೆ ಅವರು ವೃತ್ತಿಯಲ್ಲಿ ದಂತವೈಧ್ಯೆಯಾಗಿ ಪ್ರಸ್ತುತ ಶಿವಮೊಗ್ಗದ ಜನನಿ ದಂತ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿರುವ ಇವರು ಸತತವಾಗಿ ನಾಲ್ಕು ವರ್ಷಗಳಿಂದ ತನ್ನ ಕೈಚಳಕದಿಂದ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ಭಕ್ತಿಭಾವ ಮೇರೆಯುವ ಚಿತ್ರಗಳನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಈ ವರ್ಷ ಇವರು ಮಂದಿರದಲ್ಲಿ ಶಿವ ಪಾರ್ವತಿ ಭಾವಚಿತ್ರವನ್ನು ಬಿಡಿಸಿ ವೈಧೈ ವೃತ್ತಿಯ ಜೊತೆಗೆ ರಂಗೋಲಿಯಲ್ಲಿನ ಕಲೆಯಲ್ಲಿ ಕೂಡಾ ಸೈ ಎನಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ವೈಧ್ಯೆಳನ್ನು ಭೇಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಂತಿಯುತ ಜಾತ್ರೆ : ಪೆÇಲೀಸ್ ಸಿಬ್ಬಂದಿಗಳಿಗೆ ಸನ್ಮಾನ
ಸತತ ಐದು ದಿನಗಳ ಕಾಲ ನಡೆದ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಮತ್ತು ಅದ್ದೂರಿ ರಥೋತ್ಸವಕ್ಕೆ ಸಹಕರಿಸಿದ ಶಾಂತಿಯುತ ಜಾತ್ರೆ ನಡೆಯಲು ಕಾರಣಿಕೃತರಾದ ಪೆÇಲೀಸ್ ಸಿಬ್ಬಂದಿಯನ್ನು ತಾಲೂಕು ಆಡಳಿತ ಹಾಗೂ ದೇವಸ್ಥಾನ ಸಮಿತಿಯಿಂದ ಗೌರವಿಸಲಾಯಿತು.