ಒಣ ದ್ರಾಕ್ಷಿ ಸಂಸ್ಕರಣ ಘಟಕ ಉದ್ಘಾಟನೆ
ವಿಜಯಪುರ, ಮಾ.10:ಉದ್ಯಮಿ ಅಣ್ಣಾರಾಯ ಎಸ್. ಬಿರಾದಾರ ಪ್ರಾರಂಭಿಸಿರುವ ಪಂಚಗಂಗಾ ಒಣದ್ರಾಕ್ಷಿ ಸಂಸ್ಕರಣಾ ಘಟಕವನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು.
ಶನಿವಾರ ನಗರದ ಸೊಲ್ಲಾಪುರ ರಸ್ತೆಯ ಯಶೋಧಾ ಆಸ್ಪತ್ರೆ ಹಿಂದೆ ಇರುವ ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಈ ಕಾರ್ಯಕ್ರಮ ನಡೆಯಿತು.
ಘಟಕದ ಕಾರ್ಯವನ್ನು ವೀಕ್ಷಿಸಿ, ಒಣದ್ರಾಕ್ಷಿ ಸಂಗ್ರಹ, ಸಂಸ್ಕರಣೆ, ಮಾರಾಟ ಹಾಗೂ ರಫ್ತು ಮಾಡುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಈ ಘಟಕ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಅಣ್ಣಾರಾಯ ಎಸ್. ಬಿರಾದಾರ ಮತ್ತು ಅವರ ಪುತ್ರ ನಿತೀನ ಎ.ಬಿರಾದಾರ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಜಯಪುರ ಜ್ಞಾಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪಶ್ಚಿಮ ಬಂಗಾಳ ನಿವೃತ್ತ ಡಿಜಿಪಿ ಜಿ.ಎಂ.ಪಿ ರೆಡ್ಡಿ, ಉದ್ಯಮಿಗಳಾದ ಪ್ರಕಾಶಗೌಡ ಪಾಟೀಲ, ಮುಖಂಡರಾದ ಎಸ್.ಎಂ.ಪಾಟೀಲ ಗಣಿಹಾರ, ಬಸವರಾಜ ದೇಸಾಯಿ, ಡಾ.ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.