ಆನೆಗೊಂದಿ ಉತ್ಸವ, ಬಾಬುರಾವ ಕೋಬಾಳರಿಂದ ತತ್ವಪದ ಗಾಯನ
ಕಲಬುರಗಿ:ಮಾ.10:ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಆನೆಗೊಂದಿ ಉತ್ಸವದಲ್ಲಿ ಕಲ್ಯಾಣ ಕರ್ನಾಟಕದ ಹಿರಿಯ ಕಲಾವಿದರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ ಕೋಬಾಳ ಅವರು ದಿನಾಂಕ 11.03.2024 ರಂದು ಸೋಮವಾರ ಮಧ್ಯಾಹ್ನ 4:40-4:50 ರವರೆಗೆ ಶಬರಿ ವೇದಿಕೆಯಲ್ಲಿ ತತ್ವಪದ ಗಾಯನ ನೀಡಲಿದ್ದಾರೆ ಎಂದು ಆನೆಗುಂದಿ ಉತ್ಸವ ಸಮಿತಿ ತಿಳಿಸಿದೆ.