ಮಹಾ ಶಿವರಾತ್ರಿ ಪೂಜೆ ಸಲ್ಲಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ, ಮಾ,10:ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಡಾ. ಶರಣಪ್ರಕಾಶ್ ಆರ್ ಪಾಟೀಲ್ ರವರು ಅವರ ಹುಟ್ಟೂರಾದ ತಾಲೂಕಿನ ಊಡಗಿ ಗ್ರಾಮದಲ್ಲಿರುವ 11 ಮತ್ತು 12ನೇ ಶತಮಾನದ ರಾಷ್ಟ್ರಕೂಟ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಶ್ರೀ ಲೋಕೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಕುಟುಂಬ ಸಮೇತವಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆಯಲ್ಲಿ ಸಚಿವರ ಸಹೋದರು ಇದ್ದರು.