ಗುರುಸಿದ್ಧೇಶ್ವರರ ಜಾತ್ರಾ ಮಹೋತ್ಸವ: ಮಾಜಿ ಸಚಿವ ರಾಜಶೇಖರ್ ಪಾಟೀಲ ಭಾಗಿ
ಹುಮನಾಬಾದ್:ಮಾ.10: ತಾಲ್ಲೂಕಿನ ಹಳ್ಳಿಖೇಡ(ಬಿ)ನ ಗುರು ಸಿದ್ದೇಶ್ವರ ಸಂಸ್ಥಾನ ಚಿಕ್ಕಮಠದ ಸೋಮವಾರ ನಡೆದ ಶ್ರೀ ಗುರುಸಿದ್ಧೇಶ್ವರರ ದ್ವಿತೀಯ ಜಾತ್ರಾ ಉತ್ಸವ ಅಂಗವಾಗಿ ಶುಕ್ರವಾರ ನಡೆದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಾ ತಾಯಿ ಮಹಾ ಪುರಾಣ ಹಾಗೂ ಮಹಾ ಶಿವರಾತ್ರಿಯ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ ರವರು ಪಾಲ್ಗೊಂಡು ಆಧ್ಯಾತ್ಮಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಚಳಕಾಪೂರ, ಸಿದ್ಧಾರೋಢ ಮಠದ ಪ.ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿ, ಕಲ್ಲೂರು ಹಿರೇಮಠದ ಶ್ರೀ ಷ.ಬ್ರ. ಮ್ರುತ್ಯುಂಜಯ ಶಿವಯೋಗಿ ಶಿವಾಚಾರ್ಯರು, ಐನಾಪುರದ ಮಲ್ಲಯ್ಯ ಶಾಸ್ತ್ರಿಗಳು, ಆಶೀರ್ವಚನ ನೀಡಿದರು.
ಹಿರಿಯ ಸಾಹಿತಿಗಳಾದ ಸುರೇಂದ್ರ ಹೊಡಮನಿ, ಬಾಲಾಜಿ ಅಮರವಾಡಿ ಮಾತನಾಡಿದರು. ಶ್ರೀಮಠದ ಪೀಠಾದಿಪತಿ ಶ್ರೀ ಷ.ಬ್ರ. ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರ ತುಲಾಭಾರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಂದ್ರ ದೂಡ್ಡಮನಿ, ಭೋಜಪ್ಪ ಭರಶೆಟ್ಟಿ, ನಾಗರಾಜ ಹಿಬಾರೆ, ಮಲ್ಲಿಕಾರ್ಜುನ ಪ್ರಭಾ, ಬಸವರಾಜ ಪೆದ್ದಾಪೂರೆ, ರಮೇಶ ರೆಡ್ಡಿ, ರವಿರೆಡ್ಡಿ, ನರಸಿಂಗ ಸಗರ, ವೀರೇಶ ವಾಲದೂಡ್ಡಿ, ಶಶಿಕಾಂತ ಶಿಲವಂತ, ರಾಜು ಟೆಕುರ, ಶಿವಕುಮಾರ ತಿಬಷೆಟ್ಟಿ, ತುಕಾರಾಮ ಸೆಡಂಕರ, ಶಿವಕುಮಾರ, ಅಮರ ಟೇಕುರ, ಪ್ರವೀಣ್ ಶೇರಿ ತಿಬ್ಬಶೆಟ್ಟಿ, ದೇವರಾಜ ದೂಡ್ಡಮನಿ, ವಿಜಯಕುಮಾರ ಶಾಪೂರಕರ್, ನಾಗಯ್ಯ ಸ್ವಾಮಿ, ಪರಮೇಶ ಇಲ್ಲಾಳೆ, ಶಿವಕುಮಾರ್ ಗೌಡನಗುರು, ಇದ್ದರು.