ಗುರು ಶಿಷ್ಯರ ಸಂಬAದ ಅತಿ ಮಹತ್ವದ್ದಾಗಿದೆ:ರಾಚಣ್ಣಗೌಡ ಮುದ್ನಾಳ
ಸೈದಾಪುರ:sಗುರು ಶಿಷ್ಯರ ಸಂಬAದ ಅತಿ ಮುಖ್ಯವಾಗಿದ್ದೂ ಇದು ಸುಂದರ ಸಾಮಾಜಿಕ ಸಂಸ್ಕೃತಿಯನ್ನು ಕಂಡು ಕೊಳ್ಳಲು ಸಾಧ್ಯವಿದೆ. ಇದನ್ನು ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗುವಂತಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರಾದ ರಾಚಣ್ಣಗೌಡ ಮುದ್ನಾಳ ಅಭಿಪ್ರಾಯಪಟ್ಟರು.
ಪಟ್ಟಣದ ಎನ್.ವಿ.ಎಂ ಸಭಾಂಗಣದಲ್ಲಿ ನಡೆದ ಮುದ್ನಾಳ ರಾಚಣ್ಣಗೌಡ ಮೊಮೊರಿಯಲ ಎಂ.ಆರ್.ಎA ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ೧೯೮೯ ಸಾಲಿನ ವಿದ್ಯಾರ್ಥಿಗಳಿಂದ ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.
ನಮ್ಮ ಕುಟುಂಬದ ಹಿರಿಯರು ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಇಗಲೂ ನಾವುಗಳೆಲ್ಲರೂ ಸೇರಿಕೊಂಡು ಸೇವಾ ಮನೋಭಾವನೆಯ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅವರ ಮಾಡಿದ ಕೆಲಸದಿಂದ ನಾನು ಇಂದು ಈ ವೇದಿಕೆಯಲ್ಲಿ ನಿಮ್ಮನ್ನು ನೋಡುವ ಹಾಗೂ ಗುರುಗಳ ಹಾಗೂ ಶಿಷ್ಯರ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ನಿಮ್ಮಲ್ಲೆರ ಭವಿಷ್ಯ ಉಜ್ವಲವಾಗಲಿ. ಎಲ್ಲಾ ಗುರುಗಳ ಆರೋಗ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.
ನಿವೃತ್ತ ಹಿರಿಯ ಮುಖ್ಯಗುರು ಎಸ್.ಬಿ.ಪೊಲೀಸ ಪಾಟೀಲ ಮಾತನಾಡಿ, ಉತ್ತಮ ಪರಿಸರದಿಂದ ಮಾತ್ರ ಸಾಧನೆ ನಮ್ಮದಾಗುತ್ತದೆ. ನಾನು ಮನಿಷ್ಯತ್ವ ಪಡೆದ್ದಿದ್ದೂ ಸಿದ್ದೇಶ್ವರ ಶ್ರೀಗಳಿಂದ. ನನ್ನ ವೃತ್ತಿಯ ಅವಧಿಯಲ್ಲಿ ಅವುಗಳನ್ನು ಕಾರ್ಯ ರೂಪಕ್ಕೆ ತಂದಿದ್ದೇನೆ. ಇವತ್ತು ಅದು ಗೌರವ ರೂಪದಲ್ಲಿ ನನಗೆ ಸಲ್ಲುತ್ತಿದೆ ಎಂದು ಭಾವುಕರಾಗಿ ನುಡಿದರು. ಸಂಸ್ಥೆಯನ್ನು ಕಟ್ಟಿ ಬೆಳಸುವಲ್ಲಿ ದಿ.ವಿಶ್ವನಾಥರೆಡ್ಡಿ ಮುದ್ನಾಳ ಅವರ ಪಾತ್ರ ಬಹಳ ಮುಖ್ಯವಾಗಿದೆ. ಅವರಿಂದಾಗಿ ಇವತ್ತು ನಾವುಗಳೆಲ್ಲ ಉತ್ತಮ ಸಾಧನೆ ಮಾಡಲು ಸಾಹಾಯವಾಯಿತು. ಮುಂದಿನ ದಿನಗಳಲ್ಲಿ ನೀವು ಮಾಡುವ ಯಾವದೆ ಕಾರ್ಯಗಳಲ್ಲಿ ತತ್ವ ಸಿದ್ಧಾಂತವಿರಲಿ ಸೇವಾ ಮನೋಭಾವನೆಯ ವ್ಯಕ್ತಿತ್ವ ನಿಮ್ಮದಾಗಿರಲಿ ಎಂದು ಹೇಳಿದರು.
ಪ್ರೌಢ ಶಾಲೆಯ ನಿವೃತ್ತಾ ಶಿಕ್ಷಕರಾದ ಹೆಚ್.ಎನ್.ಹಬೀಬ್, ಎಂ.ಕೆ.ಬಿರೂನೂರ, ಎಸ್,ಎನ್.ದೊರನಳ್ಳಿ, ಪ್ರಭಾವತಿ ದೇವಶೆಟ್ಟಿ ಮಾತನಾಡಿದರು. ವಿದ್ಯಾರ್ಥಿಗಳಾದ ಅಶೋಕ ದೊಡ್ಡಮನಿ, ವೀರಮ್ಮ, ವೆಂಕಟೇಶ, ಕಾವೇರಿ, ಜ್ಯೋತಿ, ವಿಜಯಲಕ್ಷಿö್ಮÃ, ಭಾರತಿ, ಶ್ರೀನಿವಾಸ ಕೊತಂಬರಿಕರ ಗುರುಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ನಿವೃತ್ತಾ ಮುಖ್ಯಗುರು ಎಸ್.ಬಿ.ಪೊಲೀಸ ಪಾಟೀಲ, ಹೆಚ್.ಎನ್.ಹಬೀಬ, ಎಸ್.ಎನ್,ದೋರನಳ್ಳಿ, ಎಂ.ಕೆ.ಬೀರನೂರ, ಶರಣಪ್ಪ ಎಂ ಕೋಟಗೇರಿ, ದಿ.ವಿ.ಸಿ.ರೆಡ್ಡಿ ಪರವಾಗಿ ವೆಂಕಟರೆಡ್ಡಿ ವನಕೇರಿ, ದಿ.ಸಿದ್ದಣ್ಣಗೌಡ ಪಾಟೀಲ ಚನ್ನೂರು ಪರವಾಗಿ ಅಶೋಕ ಪಾಟೀಲ, ಪ್ರಾಥಮಿಕ ಶಾಲೆ ನಿವೃತ್ತಾ ಶಿಕ್ಷಕರಾದ ಪ್ರಭಾವತಿ ದೇವಶೆಟ್ಟಿ, ರತ್ನ ಬಾಸ್ಕರ ದೊಡ್ಡಮನಿ, ದೇವಿಂದ್ರಮ್ಮ ಜೋಳದಡಿಗಿ, ಕಲ್ಪನಾರೆಡ್ಡಿ, ದಿ.ಸುಂದರಬಾಯಿ ಮೊಕಾಶಿ ಅವರ ಪರವಾಗಿ ವಿಜಯಲಕ್ಷಿö್ಮÃ, ಸಿಬ್ಬಂದಿ ವಿರುಪಾಕ್ಷಿ ಅವರಿಗೆ ಗುರುವಂದನಾ ಕಾರ್ಯಕ್ರಮದ ಪರವಾಗಿ ವಿಶೇಷ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿಗಳ ಪ್ರತಿನಿದಿಗಳಾಗಿ ಭೀಮರೆಡ್ಡಿ ಯಡಗಿಮದ್ರ, ವೀರಮ್ಮ ಅವರನ್ನು ಸನ್ಮಾನಿಸಲಾಯಿತು.
ಪ್ರೌಢ ಶಾಲಾ ಮುಖ್ಯಗುರು ಶರಣಗೌಡ ಭೀಮನಳ್ಳಿ, ಅಪ್ಪಾರವಾವ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜ್ಯೋತಿ ಪ್ರಾರ್ಥಾನಾಗೀತೆ ಹಾಡಿದರು. ಶಿಕ್ಷಕ ವೆಂಕಟೇಶ ಸ್ವಾಗತಿಸಿದರು. ಕರಬಸಯ್ಯ ದಂಡಿಗಿಮಠ ನಿರೂಪಿಸಿದರು.
ದಿ.ವಿಶ್ವನಾಥರೆಡ್ಡಿ ಮುದ್ನಾಳ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಈ ಸಂಸ್ಥೆ ಇವತ್ತು ಉತ್ತಮ ಸಾಧನೆ ಮಾಡುವಂತಾಗಿದೆ. ನಮ್ಮ ಸೇವಾ ಅವಧಿಯಲ್ಲಿ ನಿರ್ವಹಿಸಿದ ಕಾರ್ಯಕ್ಕೆ ವಿಶ್ವನಾಥರೆಡ್ಡಿ ಮುದ್ನಾಳ ಅವರ ತತ್ವ ಸಿದ್ಧಾಂತಗಳು ಪ್ರಮುಖ ಪಾತ್ರವಹಿಸಿವೆ. ನೇರ ನಡೆ ನುಡಿ ಹಾಗೂ ಸೇವಾಮನೋಭಾವನೆಯ ಅವರ ಕಾರ್ಯಗಳು ನಮಗೆ ಮಾದರಿಯಾದಾಗ ಮಾತ್ರ ಕಾರ್ಯಕ್ರಮ ಮಹತ್ವ ಹೆಚ್ಚಾಗುತ್ತದೆ.
ಎಸ್.ಬಿ.ಪಾಟೀಲ ನಿವೃತ್ತಾ ಮುಖ್ಯಗುರು ಎಂ.ಎA.ಆರ್ ಪ್ರೌಢ ಶಾಲೆ ಯಾದಗಿರಿ