ಸೈದಾಪುರ:ಈದ್ ಮಿಲಾದ್ ಆಚರಣೆ
ಸೈದಾಪುರ:ಸೆ.೧೭:ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಅಂಗವಾಗಿ ರೈಲ್ವೆ ನಿಲ್ದಾಣದಿಂದ ಜಾಮಿಯಾ ಮಜೀದವರೆಗೆ ಮದೀನಾ ಪ್ರತಿಕೃತಿಯ ಭವ್ಯ ಮೆರವಣಿಗೆ ಮಾಡಿದರು.
ಪ್ರವಾದಿ ಮಹಮ್ಮದ ಪೈಗಂಬರ ಅವರ ಜನ್ಮದಿನ ಇದಾಗಿದ್ದೂ ಅವರು ನೊಂದವರ, ಶೋಷಿತರ ಪರವಾಗಿ ಹತ್ತಾರು ಕ್ರಾಂತಿಕಾರಿ ಹೋರಾಟಗಳ ಮೂಲಕವಾಗಿ ತಮ್ಮ ಗಟ್ಟಿತನದಿಂದ ಶೋಷಣೆಗೆ ಒಳಗಾದವರಿಗೆ ದನಿಯಾಗಿ ನಿಂತರು. ಸಮಾಜ ಮತ್ತು ಸಮುದಾಯದಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತೊಡೆದು ಹಾಕಿದರು. ಅವರ ಸಂದೇಶಗಳು ಸರ್ವ ಕಾಲಕ್ಕೂ ಮಾರ್ಗದರ್ಶನವಾಗಿವೆ. ನಿತ್ಯವು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಾಮೀಯ ಮಜೀದ ಅಧ್ಯಕ್ಷರಾದ ಮೌಲಾನ ಸಾಬ, ಉಪಾಧ್ಯಕ್ಷ ಅಲ್ಲಾಭಾಷ ಹಿಚಗೇರಿ, ಶೇರಅಲಿ, ಅಬ್ದುಲ್ ಆಫೀಸ್, ಮಹ್ಮದ ಖಾಜಾ, ನಿಜಾಮ, ಮುಸ್ತಾಕ ಸೇರಿದಂತೆ ಇತರರಿದ್ದರು.